ವಿದ್ಯುತ್ಚಾಲಿತ ಬೇಲಿಯಿಂದ ಶಾಕ್ ತಗಲಿ ಇಬ್ಬರು ಮೃತ್ಯು
ಪತ್ತನಂತಿಟ್ಟ: ವಿದ್ಯುತ್ಚಾಲಿಕ ಬೇಲಿಯಿಂದ ಶಾಕ್ ತಗಲಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಪತ್ತನಂತಿಟ್ಟ ಪಂದಳಂ ಕುರುಂಬಾಲಿ ತೋಟುಕ್ಕರದಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು ಸ್ಥಳೀಯ ಅರುಣೋದಯ ನಿವಾಸಿಗಳಾದ ಚಂದ್ರಶೇಖರನ್ (65) ಮತ್ತು ಪಿ.ಜೆ. ಗೋಪಾಲ ಪಿಳ್ಳೆ (62) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ೭ಕ್ಕೆ ಈ ಘಟನೆ ನಡೆದಿದೆ. ಇವರಿಬ್ಬರು ಕೃಷಿಕರಾಗಿ ದ್ದಾರೆ. ತಮ್ಮ ಕೃಷಿ ತೋಟಕ್ಕೆ ಕಾಡು ಹಂದಿಗಳು ನುಗ್ಗುವುದನ್ನು ತಡೆಗಟ್ಟಲು ಅವರು ತೋಟದ ಸುತ್ತ ವಿದ್ಯುತ್ ಚಾಲಿತಬೇಲಿ ನಿರ್ಮಿಸಿದ್ದರು. ಇಂದು ಬೆಳಿಗ್ಗೆ ಈ ಇಬ್ಬರ ಪೈಕಿ ಒಬ್ಬರಿಗೆ ಬೇಲಿಯಿಂದ ಶಾಕ್ ತಗಲಿದೆ. ಅದನ್ನು ಕಂಡು ಇನ್ನೋರ್ವರು ಅವರನ್ನು ರಕ್ಷಿಸಲು ಬಂದಾಗ ಅವರಿಗೂ ಶಾಕ್ ತಗಲಿದೆ. ಒಬ್ಬರು ಘಟನೆ ಸ್ಥಳದಲ್ಲೇ ಸಾವನ್ನಪ್ಪ್ಟಿರೆ, ಇನ್ನೋರ್ವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.