ವಿಧಾನಸಭೆಯಲ್ಲಿ ಮುಂದುವರಿದ ವಾಗ್ವಾದ

ತಿರುವನಂತಪುರ: ವಿಧಾನಸಭಾ ಅಧಿವೇಶನ ಆರಂಭಗೊಂಡ ಎರಡನೇ ದಿನವೂ ಸದನದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಮಧ್ಯೆ ವಾಗ್ವಾದ ನಡೆದಿದೆ. ವಿಪಕ್ಷ ಶಾಸಕರ ವಿರುದ್ಧ ಸಚಿವ ಎಂ.ಬಿ. ರಾಜೇಶ್ ರಂಗಕ್ಕಿಳಿ ಯುವುದರೊಂದಿಗೆ ಮತ್ತೆ ವಾಗ್ವಾದ ತೀವ್ರಗೊಂಡಿದೆ.

 ನಿನ್ನೆ ಸ್ಪೀಕರ್ ವಿರುದ್ಧ ನಡೆದ ಪ್ರತಿಭಟನೆ ತೀವ್ರ ಶಿಸ್ತು ಉಲ್ಲಂಘನೆಯಾಗಿದೆ ಎಂದು ಸಚಿವ ಎಂ.ಬಿ. ರಾಜೇಶ್ ತಿಳಿಸಿದ್ದಾರೆ. ಅಲ್ಲದೆ ನಾಲ್ವರು ವಿಪಕ್ಷ ಸದಸ್ಯರಿಗೆ ತಾಕೀತು ನೀಡಿರುವುದು ವಿಪಕ್ಷ ನೇತಾರರಲ್ಲಿ ರೋಷಕ್ಕೆ ಕಾರಣವಾಯಿತು.

You cannot copy contents of this page