ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ ಚಿಕಿತ್ಸೆಗೆ ದಾಖಲು

ಮುಂಬೈ: ಇಂಡ್ಯನ್ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿಯನ್ನು  ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ ಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ೫೨ರ ಹರೆಯದ ಕಾಂಬ್ಳಿಯ ಆರೋಗ್ಯ ಚಿಂತಾಜನಗವಾಗಿದೆ ಯೆಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. 1983 ರಲ್ಲಿ ವಿಶ್ವಕಪ್ ಗಳಿಸಿದ ಭಾರತದ  ತಂಡದಲ್ಲಿದ್ದ ಆಟಗಾರರು ಕಾಂಬ್ಳಿಗೆ ಸಹಾಯ ಭರವಸೆ ನೀಡಿದ್ದರು.  ಕಿಡ್ನಿ ಸಂಬಂಧ ಅಸೌಖ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ  ದಾಖಲಿಸಿರುವುದಾಗಿ ಹೇಳಲಾ ಗುತ್ತಿದೆ. 2013ರಲ್ಲಿ ಕಾಂಬ್ಳಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.  ಕಾಂಬ್ಳಿ ಭಾರತಕ್ಕಾಗಿ 17 ಟೆಸ್ಟ್‌ಗಳು, 104 ಏಕದಿನ ಪಂದ್ಯಗಳಲ್ಲಿ ಆಟವಾಡಿ ದ್ದರು. ಎರಡು ಡಬ್ಬಲ್ ಸೆಂಚುರಿ, 4 ಸೆಂಚುರಿ ಇವರು ಗಳಿಸಿದ್ದರು. ಸತತ ಎರಡು ಟೆಸ್ಟ್‌ಗಳಲ್ಲಿ ಡಬ್ಬಲ್ ಸೆಂಚುರಿ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಈಗಲೂ ಇವರ ಹೆಸರಲ್ಲಿದೆ.

Leave a Reply

Your email address will not be published. Required fields are marked *

You cannot copy content of this page