ವಿವಾಹ ಭರವಸೆ ನೀಡಿ ದೌರ್ಜನ್ಯ: ಯುವತಿಯ ದೂರಿನಂತೆ ರಾಪರ್‌ವೇಡನ್ ವಿರುದ್ಧ ಕೇಸು
ಕೊಚ್ಚಿ: ರಾಪರ್‌ವೇಡ ದೌರ್ಜನ್ಯಗೈದ ಬಗ್ಗೆ ಡಾಕ್ಟರ್ ಆದ ಯುವತಿ ದೂರು ನೀಡಿದ್ದಾರೆ. ವಿವಾಹ ಭರವಸೆ ನೀಡಿ ದೌರ್ಜನ್ಯಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕೊಚ್ಚಿ ತೃಕ್ಕಾಕರ ಪೊಲೀಸರು ಈ ದೂರಿನಂತೆ ಕೇಸು ದಾಖಲಿಸಿದ್ದಾರೆ. 2021 ಆಗಸ್ಟ್‌ನಿಂದ 2023 ಮಾರ್ಚ್ ವರೆಗೆ ವಿವಿಧ ಸ್ಥಳಗಳಲ್ಲಿ ವೇಡನ್ ತನ್ನನ್ನು ದೌರ್ಜನ್ಯಗೈದಿ ರುವುದಾಗಿ ದೂರಿದ್ದಾರೆ. ಸತತವಾಗಿ ದೌರ್ಜನ್ಯಗೈದ ಬಳಿಕ ವಿವಾಹ ಭರವಸೆಯಿಂದ ರಾಪರ್‌ವೇಡನ್ ಹಿಂದೆ ಸರಿದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದ್ದು, ಇದರಿಂದ ತನಖೆ ಮಾನಸಿಕ ಆಘಾತ ಉಂಟಾಗಿದೆ ಎಂದು ಯುವತಿ ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಮೂಲಕ ವೇಡನ್ ಜೊತೆ ಗೆಳೆತನ ಆರಂಭಿಸಿ ರುವುದಾಗಿಯೂ ಈ ಮಧ್ಯೆ ಕಲ್ಲಿಕೋಟೆಯ ಫ್ಲ್ಯಾಟ್‌ವೊಂದರಲ್ಲಿ ತನ್ನನ್ನು ಈತ ಮಾನಭಂಗ ಗೈದಿರು ವುದಾಗಿಯೂ ಡಾಕ್ಟರ್ ಹೇಳಿಕೆ ನೀಡಿದ್ದಾರೆ. ಆದರೆ ೨೦೨೩ರಲ್ಲಿ ಈತ ತನ್ನನ್ನು ದೂರ ಮಾಡಿರುವುದಾ ಗಿಯೂ ಯುವತಿ ತಿಳಿಸಿದ್ದಾರೆ.
ಸ್ವಾರ್ಥೆಯಾಗಿದ್ದಿ ಎಂದು ತೆಗಳಿ ತನ್ನನ್ನು ಹೊರತುಪಡಿಸಿರುವುದಾಗಿ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಬಹಿರಂಗಪಡಿಸಿದ್ದಾರೆ. ವೇಡನ್ ವಿರುದ್ಧ ಈ ಮೊದಲು ಮೀ ಟು ಆರೋಪವೂ ಕೇಳಿ ಬಂದಿತ್ತು. ಮಹಿಳೆಯನ್ನು ಒಂದಕ್ಕಿಂತ ಹೆಚ್ಚು ಬಾರಿ ಮಾನಭಂಗ ಗೈದ ಪ್ರಕರಣದಂತೆ ಈತನ ವಿರುದ್ಧ ಕೇಸು ದಾಖಲಿಸಲಾಗಿದೆ.