ವಿವಾಹ ಭರವಸೆಯೊಡ್ಡಿ ಬಾಲಕಿಗೆ ಕಿರುಕುಳ ಗರ್ಭಿಣಿಯಾದಾಗ ವಿದೇಶಕ್ಕೆ ಪರಾರಿಯಾದ ಆರೋಪಿ ಸೆರೆ

ಹೊಸದುರ್ಗ: ಶಾಲಾ ವಿದ್ಯಾರ್ಥಿ ನಿಗೆ ಮದುವೆ ಭರವಸೆ ಯೊಡ್ಡಿ ಲೈಂಗಿಕ ಕಿರುಕುಳ ನೀಡಿ ಗರ್ಭಿಣಿಯಾಗಿಸಿದ ಬಳಿಕ ವಿದೇಶಕ್ಕೆ ಪರಾರಿಯಾದ ಆರೋಪಿಯನ್ನು ಕಣ್ಣೂರು ವಿಮಾನ ನಿಲ್ದಾಣದಿಂದ ಪೊಲೀಸರು ಬಂಧಿಸಿ ದ್ದಾರೆ. ಕಾಞಂಗಾಡ್ ಪುಲ್ಲೂರು ನಿವಾಸಿ ಮುಹಮ್ಮದ್ ಆಸಿಫ್ (26) ಎಂಬಾತನನ್ನು ಪೋಕ್ಸೋ ನಿಯಮ ಪ್ರಕಾರ ಬಂಧಿಸಲಾಗಿದೆ.  ವಿದ್ಯಾರ್ಥಿನಿಗೆ  ವಿವಾಹ ಭರವಸೆಯೊಡ್ಡಿದ ಈತ 2022ರಿಂದ ಹಲವು ಬಾರಿಯಾಗಿ ಕಿರುಕುಳ ನೀಡಿದ್ದಾನೆನ್ನಲಾಗಿದೆ. ಅಲ್ಲದೆ ವಿದ್ಯಾರ್ಥಿನಿಯ ೫ಪವನ್ ಚಿನ್ನಾಭರಣವನ್ನು ಈತ ಅಪಹರಿಸಿದ್ದಾನೆಂದು ದೂರಲಾಗಿದೆ. ಬಾಲಕಿ ಗರ್ಭಿಣಿಯಾದ ವಿಷಯ ತಿಳಿದು  ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಕಸಬ ಪೊಲೀಸರು ಆರೋಪಿಯ ಪತ್ತೆಗಾಗಿ ನೋಟೀಸು ಹೊರಡಿಸಿದ್ದರು.  ವಿದೇಶದಿಂದ ಮರಳಿದ ಆರೋಪಿ ಕಣ್ಣೂರು ವಿಮಾನ ನಿಲ್ದಾಣಕ್ಕೆ ತಲುಪಿದ್ದನು. ಈ ವೇಳೆ  ಆರೋಪಿಯನ್ನು ಎಮಿಗ್ರೇಷನ್ ವಿಭಾಗ ತಡೆದು ನಿಲ್ಲಿಸಿ ಕಸಬ ಪೊಲೀಸರಿಗೆ ಮಾಹಿತಿ ನೀಡಿತ್ತು. ಇದರಂತೆ  ಅಲ್ಲಿಗೆ ತೆರಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.

You cannot copy contents of this page