ವಿವಿಧೆಡೆ ಬಿಎಂಎಸ್ ಸ್ಥಾಪನಾ ದಿನಾಚರಣೆ
ಮಂಜೇಶ್ವರ: ಬಿಎಂಎಸ್ ಸ್ಥಾಪನಾ ದಿನದಂಗವಾಗಿ ವಿವಿಧ ಕಡೆಗಳಲ್ಲಿ ಧ್ವಜಾರೋಹಣ ನಡೆಸಲಾಯಿತು. ಮಂಜೇಶ್ವರ ವಲಯದ ಕುಂಜತ್ತೂರು ಯೂನಿಟ್‌ನಲ್ಲಿ ರವಿಮಜಲ್, ಹೊಸಂಗಡಿಯಲ್ಲಿ ಪ್ರಕಾಶ್ ಕೆ.ಪಿ, ಬೆಜ್ಜ ಯೂನಿಟ್‌ನಲ್ಲಿ ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಯಶವಂತಿ ಬೆಜ್ಜ, ಮೊರತ್ತಣೆಯಲ್ಲಿ ರಾಮಚಂದ್ರ ಬಟ್ಟಿಪದವು, ಕೋಳ್ಯೂರ್‌ನಲ್ಲಿ ನಾರಾಯಣ ತುಂಗ, ಗುವೆದಪಡ್ಪುವಿನಲ್ಲಿ ಸತೀಶ್ ಗುರಿಕುಮೇರ್, ದೈಗೋಳಿ ಯಲ್ಲಿ ಸತ್ಯನಾರಾಯಣ ಭಟ್, ಪಾವಳ ಘಟಕದಲ್ಲಿ ರೂಪದರ, ಮಜೀರ್ಪಳ್ಳ ದಲ್ಲಿ ಸುನಿಲ್ ಧ್ವಜಾರೋಹಣಗೈದರು. ಹೊಸಂಗಡಿಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಶ್ರೀಧರ ಬಿ.ಎಂ. ಅಧ್ಯಕ್ಷತೆ ವಹಿಸಿದರು. ಭಾಸ್ಕರ ಬಿ.ಎಂ, ಪುಟ್ಟರಾಜು, ಹರೀಶ್, ನಾರಾಯಣ, ಸುರೇಶ್ ಶುಭ ಕೋರಿದರು. ಲೋಹಿತ್ ಮಜಿಬೈಲ್ ಸ್ವಾಗತಿಸಿ, ಗಿರೀಶ್ ದುರ್ಗಿಪಳ್ಳ ವಂದಿಸಿದರು.
ಕುಂಬಳೆ ನಾರಾಯಣಮಂಗಲ ಟೈಲರಿಂಗ್ ಯೂನಿಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೋಭಾ ಟೀಚರ್ ಎನ್. ಧ್ವಜಾರೋಹಣಗೈದರು. ನಾಗವೇಣಿ ದಿನೇಶ್ ಅಧ್ಯಕ್ಷತೆ ವಹಿಸಿದರು. ಸುಂದರಿ ಶುಭ ಕೋರಿದರು. ವಿಶಾಲಾಕ್ಷಿ ಸ್ವಾಗತಿಸಿ, ಲೀಲಾ ಸುಧಾಕರ್ ವಂದಿಸಿದರು. ನಿರ್ಮಾಣ ಯೂನಿಟ್ ನಾರಾಯಣಮಂಗಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೂನಿಟ್ ಅಧ್ಯಕ್ಷ ವಸಂತ ಆಚಾರ್ಯ ಧ್ವಜಾರೋಹಣಗೈದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮುರಳೀಧರ ಯಾದವ್ ಶುಭ ಕೋರಿದರು. ಕಾರ್ಯದರ್ಶಿ ಗೋಪಾಲಕೃಷ್ಣ ಕೆ. ಸ್ವಾಗತಿಸಿ, ನಾರಾಯಣ ವಂದಿಸಿದರು. ಗೋಪಾಲಕೃಷ್ಣ ಎಂ, ಮಾಲಿಂಗ ಪಾಟಾಳಿ, ದಿನೇಶ್ ಕೆ. ಭಾಗವಹಿಸಿದರು.