ವಿಷ ಸೇವನೆ: ತಾಯಿ, ಇಬ್ಬರು ಮಕ್ಕಳು ಗಂಭೀರ; ತಾಯಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲು
ಕಾಸರಗೋಡು: ವಿಷಪ್ರಾಶನಗೈದ ತಾಯಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಗಂಭೀರಾವಸ್ಥೆಯಲ್ಲಿ ಕಣ್ಣೂರು ಸರಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬೇಕಲ ಸಮೀಪದ ಮೌವ್ವಲ್‌ನ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಪಳ್ಳಿಕ್ಕೆರೆ ಪರಯಂಗಾನಂ ನಿವಾಸಿ ಶೆರೀಫ್ ಅರಯಾಲ್ ಎಂಬವರ ಪತ್ನಿ ಸರೀನ ಮತ್ತು ಆಕೆಯ ೭ ಮತ್ತು ೪ ವರ್ಷದ ಇಬ್ಬರು ಗಂಡು ಮಕ್ಕ ಳನ್ನು ವಿಷಪ್ರಾಶನಗೈದು ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ. ಇವರ ಸ್ಥಿತಿ ಗಂಭೀರವಾಗಿದೆಯೆಂದು ವೈದ್ಯರು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಸುಮಾರು ೮ ಗಂಟೆ ವೇಳೆ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿ ವಿಷ ಸೇವಿಸಿದ ಯುವತಿ ಯ ಪತಿ ಶೆರೀಫ್ ಅರೆಯಾಲ್ ನೀಡಿದ ಹೇಳಿಕೆಯಲ್ಲಿ, ಪತ್ನಿ ತನ್ನ ಇಬ್ಬರು ಮಕ್ಕಳಿಗೆ ವಿಷವುಣಿಸಿ ಬಳಿಕ ಆಕೆಯೂ ವಿಷಸೇವಿಸಿರುವುದಾಗಿ ತಿಳಿಸಿದ್ದಾನೆ. ಅದರಂತೆ ಸರೀನಳ ವಿರುದ್ಧ ಬೇಕಲ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ವಿವಾಹ ವಿಚ್ಛೇಧನಕ್ಕಾಗಿ ಪತ್ನಿ ತನ್ನನ್ನು ನಿರಂತರವಾಗಿ ಒತ್ತಾಯಿಸು ತ್ತಿದ್ದಳೆಂದೂ ಅದಕ್ಕೆ ಒಪ್ಪದ ದ್ವೇಷದಿಂದ ಆಕೆ ಇಬ್ಬರು ಮಕ್ಕಳಿಗೆ ವಿಷವುಣಿಸಿ ಬಳಿಕ ಆಕೆಯೂ ವಿಷಪ್ರಾಶನಗೈದಿ ರುವು ದಾಗಿ ಪತಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಮಾತ್ರ ವಲ್ಲ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋ ಪದಂತೆ ಪತಿಯ ವಿರುದ್ಧವೂ ಬೇಕಲ ಪೊಲೀಸರು ಬೇರೊಂದು ಕೇಸು ದಾಖಲಿಸಿಕೊಂಡಿದ್ದಾರೆ.