ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಅಂಗನವಾಡಿ ಸಹಾಯಕಿ ಮೃತ್ಯು
ಬದಿಯಡ್ಕ: ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅಂಗನ ವಾಡಿ ಸಹಾಯಕಿ ಮೃತಪಟ್ಟರು. ಬದಿಯಡ್ಕ ಬಳಿಯ ಬಾರಡ್ಕ ನಿವಾಸಿ ಅರುಣ್ ಕುಮಾರ್ ಎಂಬವರ ಪತ್ನಿ ಲೀಲಾವತಿ (52) ಎಂಬವರು ಮೃತಪಟ್ಟವರು. ಇವರು ಬದಿಯಡ್ಕ ಚೆನ್ನಾರಕಟ್ಟೆ ಅಂಗನವಾಡಿಯ ಸಹಾಯಕಿ ಯಾಗಿದ್ದರು. ಕಳೆದ ಶನಿವಾರ ಇವರು ಜ್ಯೂಸ್ನಲ್ಲಿ ವಿಷ ಬೆರೆಸಿ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೂ ಬಳಿಕ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಮೃತಪಟ್ಟರು.
ಮೃತರು ಪತಿ, ಮಕ್ಕಳಾದ ಪ್ರೇಮರಾಜ್, ಪ್ರಸೀತ, ಪ್ರದೀಪ, ಪ್ರತೀಕ್ಷ, ಅಳಿಯ-ಸೊಸೆಯಂದಿ ರಾದ ಅಕ್ಷತ, ಉಷಾಲಾಕ್ಷ, ಶ್ರೀಜು, ಧನಿಷ, ಸಹೋದರಿಯರಾದ ಚಂದ್ರಾವತಿ, ಗುಲಾಬಿ, ಯಶೋಧ, ರತ್ನ, ದೇವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.