ಎಡನೀರು: ವಿಷಪ್ರಾಶನಗೈದು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಎಡನೀರು ಚೂರಿಮೂಲೆಯ ಮೈಮೂನಾ (೪೩) ಸಾವನ್ನಪ್ಪಿದ ಮಹಿಳೆ. ಹಳದಿಕಾಮಾಲೆ ತಗಲಿರುವುದಾಗಿ ಶಂಕಿಸಿ ಮೈಮೂನಾರನ್ನು ಮನೆಯ ವರು ಮೊದಲು ವಿದ್ಯಾನಗರದ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಹಳದಿಕಾ ಮಾಲೆ ಗುಣಮುಖ ಗೊಳ್ಳದಾಗ ಶಂಕೆಗೊಂಡ ವೈದ್ಯರು ಉನ್ನತ ಮಟ್ಟದ ಪರೀಕ್ಷೆಗೊಳಪಡಿ ಸಿದಾಗ ಮೈಮೂನ ವಿಷ ಸೇವಿಸಿರುವುದು ಸ್ಪಷ್ಟಗೊಂಡಿದೆ. ನಂತರ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಕೊನೆಯುಸಿರೆಳೆ ದರು. ಆದೂರು ಪೊಲೀಸರು ಈಬಗ್ಗೆ ತನಿಖೆ ಆರಂಭಿಸಿದ್ದಾರೆ.
