ವಿಸಿಟಿಂಗ್ ವೀಸಾಕ್ಕಾಗಿ ನೀಡಿದ ದಾಖಲೆಗಳನ್ನು ಬಳಸಿ ನಕಲಿ ವೀಸಾ ದೊರಕಿಸಿ ಸುಬ್ಬಯ್ಯಕಟ್ಟೆ ನಿವಾಸಿಯನ್ನು ಖತ್ತರ್‌ಗೆ ಕಳುಹಿಸಿಕೊಟ್ಟಿರುವುದಾಗಿ ದೂರು
ಕಾಸರಗೋಡು: ಪತ್ನಿ ಹಾಗೂ ಮಕ್ಕಳನ್ನು ಶಾಲಾ ರಜಾ ಕಾಲದಲ್ಲಿ ಖತ್ತರ್‌ಗೆ ಕರೆದೊಯ್ಯಲು ಉಳಿಯತ್ತಡ್ಕದ ಟ್ರಾವಲರ್ ಏಜೆಂಟ್‌ಗೆ ಸಲ್ಲಿಸಿದ ಪಾಸ್‌ಪೋರ್ಟ್, ಖತ್ತರ್ ಐಡಿ, ವಾಸಸ್ಥಳದ ವಿಳಾಸ, ವಿದ್ಯುತ್ ಬಿಲ್ ಎಂಬಿವುಗಳನ್ನು ಬಳಸಿ ನಕಲಿ ವೀಸಾ ತಯಾರಿಸಿ ಬೇರೊಬ್ಬರನ್ನು ಖತ್ತರ್‌ಗೆ ಕಳುಹಿಸಿರುವುದಾಗಿ ದೂರುಂಟಾಗಿದೆ.
ನೀರ್ಚಾಲು ಕನ್ಯಪ್ಪಾಡಿಯ ಮುಹಮ್ಮದ್‌ರ ಪುತ್ರ ಫಿರೋಸ್ ಅಲಿ ಅಹಮ್ಮದ್ ರ ದೂರಿನಂತೆ ವಿದ್ಯಾನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೂರು ವರ್ಷಗಳಿಂದ ಫಿರೋಸ್ ಅಲಿ ಅಹಮ್ಮದ್ ದೋಹಾದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಪತ್ನಿ ಹಾಗೂ ಮಕ್ಕಳು ಕಳೆದ ಶಾಲಾ ರಜಾ ಕಾಲದಲ್ಲಿ ಸಂದರ್ಶನ ವೀಸಾದಲ್ಲಿ ಖತ್ತರ್‌ಗೆ ತಲುಪಿದ್ದರು. ಇವರ ವಿಸಿಟಿಂಗ್ ವೀಸಾಕ್ಕಾಗಿ ಫಿರೋಸ್ ಅಲಿ ಅಹಮ್ಮದ್‌ರ ವೀಸಾ ಹಾಗೂ ಖತ್ತರ್ ಐಡಿ ಮತ್ತಿತರ ದಾಖಲೆಗಳನ್ನು ಉಳಿಯತ್ತಡ್ಕದ ಟ್ರಾವೆಲ್ ಏಜೆನ್ಸಿಗೆ ನೀಡಲಾಗಿತ್ತು. ಟ್ರಾವೆಲ್ ಏಜೆನ್ಸಿ ಇವರಿಗೆ ವಿಸಿಟಿಂಗ್ ವೀಸಾ ದೊರಕಿಸಿಕೊಟ್ಟಿದೆ. ಅದನ್ನು ಬಳಸಿ ಖತ್ತರ್‌ಗೆ ತಲುಪಿದ ಇವರು ಎರಡು ತಿಂಗಳು ಅಲ್ಲಿ ವಾಸಿಸಿ ಮರಳಿದ್ದರು. ಇವರೊಂದಿಗೆ ಊರಿಗೆ ಮರಳಿದ ಫಿರೋಸ್ ಅಲಿ ಅಹಮ್ಮದ್ ಮರಳಿ ಖತ್ತರ್‌ಗೆ ತೆರಳಿದ್ದಾರೆ. ಅನಂತರ 2024 ಜೂನ್ 16ರಂದು ತನ್ನ ಐಡಿ ಮತ್ತಿತರ ದಾಖಲೆಗಳನ್ನು ಬಳಸಿ ತಯಾರಿಸಿದ ನಕಲಿ ವಿಸಿಟಿಂಗ್ ವೀಸಾದಲ್ಲಿ ಕುಡಾಲುಮೇರ್ಕಳ ಸುಬ್ಬಯ್ಯಕಟ್ಟೆಯ ಮೊಹಮ್ಮದ್‌ರ ಪುತ್ರ ಅಬ್ದುಲ್ ಅಸೀಸ್ ಕೂಡಾ ಖತ್ತರ್‌ಗೆ ತೆರಳಿದ್ದಾರೆ. ಇದರಂತೆ ಉಳಿಯತ್ತಡ್ಕದ ಏರ್‌ವೇ ಟ್ರಾವೆಲ್ ಮಾಲಕ ಫಿರೋಸ್ ಕುಂಬಳೆ ಫ್ಲೈ ಪೋಸ್ಟ್ ಟ್ರಾವೆಲ್ ಆಂಡ್ ಟೂರ್ಸ್ ಪ್ರೊಪ್ರೈಟರ್, ನಕಲಿ ವಿಸಿಟಿಂಗ್ ವೀಸಾ ಪಡೆದ ಸುಬ್ಬಯ್ಯಕಟ್ಟೆಯ ಅಬ್ದುಲ್ ಅಸೀಸ್ ಎಂಬಿವರ ವಿರುದ್ಧ ದೂರು ನೀಡಲಾಗಿದೆ. ವಿಸಿಟಿಂಗ್ ವೀಸಾದಲ್ಲಿ ಖತ್ತರ್‌ಗೆ ತಲುಪಿದ ಅಬ್ದುಲ್ ಅಸೀಸ್‌ನನ್ನು ಅನಿವಾಸಿಗಳ ಸಂಘಟನೆ ಸೆರೆಹಿಡಿಯುವುದ ರೊಂದಿಗೆ ವೀಸಾ ವಂಚನೆ ಬಹಿರಂಗಗೊಂಡಿದೆ. ನಿಮ್ಮ ಹೆಸರಲ್ಲಿ ಒಂದು ನಕಲಿ ವಿಸಿಟಿಂಗ್ ವೀಸಾದಲ್ಲಿ ಓರ್ವ ತಲುಪಿದ್ದಾನೆಂದು ಫಿರೋಸ್ ಅಲಿ ಅಹಮ್ಮದ್‌ರಿಗೆ ಇವರು ತಿಳಿಸಿದ್ದಾರೆ. ವಾಸಸ್ಥಳಕ್ಕೆ ತಲುಪಿದ ಫಿರೋಸ್ ಅಲಿ ಅಹಮ್ಮದ್ ಅಬ್ದುಲ್ ಅಸೀಸ್‌ನನ್ನು ಕೂಡಲೇ ಊರಿಗೆ ಕಳುಹಿಸಿಕೊಟ್ಟರು. ನಕಲಿ ವಿಸಿಟಿಂಗ್ ವೀಸಾದಲ್ಲಿ ಖತ್ತರ್‌ಗೆ ತಲುಪುವವರು ಯಾವುದಾದರೂ ಕಾನೂನು ವಿರುದ್ಧ ಚಟುವಟಿಕೆಯಲ್ಲಿ ತೊಡಗಿದ್ದಲ್ಲಿ ಪ್ರಕರಣದಲ್ಲಿ ಸಿಲುಕಿ ಶಿಕ್ಷೆ ಅನುಭವಿಸಬೇಕಾಗಿ ಬರುವುದು ಸ್ಪೋನ್ಸರ್ ಆದ ತಾನಾಗಿದ್ದೇನೆಂದೂ ಆದ್ದರಿಂದ ಅದಕ್ಕೆ ನಕಲಿ ವಿಸಿಟಿಂಗ್ ವೀಸಾ ದೊರಕಿಸಿಕೊಟ್ಟ ಉಳಿಯತ್ತಡ್ಕ, ಕುಂಬಳೆ ಟ್ರಾವೆಲ್ ಮಾಲಕರು ಹಾಗೂ ವೀಸಾ ಉಪಯೋಗಿಸಿ ಖತ್ತರ್‌ಗೆ ತಲುಪಿದ ವ್ಯಕ್ತಿ ವಿರುದ್ಧ ಮಾದರಿಯುತ ಕ್ರಮ ಕೈಗೊಳ್ಳಬೇಕೆಂದು ಫಿರೋಸ್ ಅಲಿ ಅಹಮ್ಮದ್ ಪೊಲೀಸರಲ್ಲಿ ಆಗ್ರಹಪಟ್ಟಿದ್ದಾರೆ.