ವೃದ್ಧ ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಮಂಜೇಶ್ವರ: ವೃದ್ಧನೋರ್ವ ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊಡ್ಲಮೊಗರು ಕತ್ತರಿಕೋಡಿ ನಿವಾಸಿ ತಂಬಾನ್ (73) ಮೃತಪಟ್ಟ ವ್ಯಕ್ತಿ. ಇವರ ಮೃತದೇಹ ನಿನ್ನೆ ಅಪರಾಹ್ನ ಮನೆಯಿಂದ ಅಲ್ಪ ದೂರ ಬೇರೊಬ್ಬ ವ್ಯಕ್ತಿಯ ಆವರಣರಹಿತ ಬಾವಿಯಲ್ಲಿ ಪತ್ತೆಯಾಗಿದೆ. ನೀರಿನ ಮೇಲೆ ಮೃತದೇಹ ತೇಲುತ್ತಿರುವುದನ್ನು ಕಂಡ ಮನೆಯವರು ನೀಡಿದ ಮಾಹಿತಿ ಯಂತೆ ಉಪ್ಪಳ ಅಗ್ನಿಶಾಮಕದಳ ತಲುಪಿ ಮೃತದೇಹವನ್ನು ಮೇಲಕ್ಕೆತ್ತಿದೆ. ಬಳಿಕ ಮಂಜೇಶ್ವರ ಪೊಲೀಸರು ಮಹಜರು ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನ ರಲ್ ಆಸ್ಪತ್ರೆಗೆ ಕೊಂಡೊಯ್ಯ ಲಾಗಿದೆ. ತಂಬಾನ್ ಬಾವಿ ಬದಿಯಲ್ಲಾಗಿ ನಡೆದು ಹೋಗುತ್ತಿದ್ದ ವೇಳೆ ಆಯತಪ್ಪಿ ಬಾವಿಗೆ ಬಿದ್ದಿರ ಬಹುದೆಂದು ಅಂದಾಜಿಸಲಾಗಿದೆ. ಇವರು ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಇದರಿಂದ ಇವರು ಯಾವಾಗ ಬಾವಿಗೆ ಬಿದ್ದಿದ್ದಾರೆಂದು ಖಚಿತಗೊಂಡಿಲ್ಲ. ನಾಲ್ಕು ದಿನಗಳ ಹಿಂದೆ ಬಿದ್ದಿರಬಹುದೆಂದು ಅಂದಾಜಿ ಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ತಂಬಾನ್‌ರ ಪತ್ನಿ ಸರಸ್ವತಿ ಈ ಹಿಂದೆ ನಿಧನಹೊಂದಿದ್ದಾರೆ. ಮೃತರು ಮಕ್ಕಳಾದ ಶೋಭಾ, ಅನಿತಾ, ಶಿವ, ಮಣಿ, ಅಳಿಯಂದಿರಾದ ಸುರೇಶ, ಗೋಪಾಲ, ಸೊಸೆ ನಿಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.