ವೃದ್ಧೆಯ ಕೊಲೆಗೈದು ಮೃತದೇಹ ಹೂತು ಹಾಕಿದ ಪ್ರಕರಣ: ನಾಪತ್ತೆಯಾದ ಉಡುಪಿಯ ಮಹಿಳೆ, ಪತಿಗಾಗಿ ಕಾಸರಗೋಡಿನಲ್ಲೂ ಶೋಧ

ಆಲಪ್ಪುಳ: ಆಲಪ್ಪುಳ ಸಮೀಪ ವೃದ್ಧೆಯೊಬ್ಬರನ್ನು ಕೊಲೆಗೈದು ಮೃತದೇಹವನ್ನು ಮಣ್ಣಿನಡಿ ಹೂತು ಹಾಕಿದ ಪ್ರಕರಣದಲ್ಲಿ ಆರೋಪಿಗಳೆಂದು ಸಂಶಯಿಸಲಾದ ಕರ್ನಾಟಕದ ಉಡುಪಿ ನಿವಾಸಿ ಮಹಿಳೆ ಹಾಗೂ  ಆಕೆಯ ಪತಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.

ಎರ್ನಾಕುಳಂ ಸೌತ್ ರೈಲ್ವೇ ನಿಲ್ದಾಣ ಬಳಿ ಕರಿತ್ತಲ ರೋಡ್ ಶಿವಕೃಪಾದ ಸುಭದ್ರ (73) ಎಂಬವರ ಕೊಲೆ ಪ್ರಕರಣದಲ್ಲಿ ತನಿಖೆ ತೀವ್ರಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳೆಂದು ಸಂಶಯಿಸಲಾದ  ಉಡುಪಿ ನಿವಾಸಿ ಶರ್ಮಿಳಾ  ಹಾಗೂ ಆಕೆಯ ಪತಿ ಮ್ಯಾಥ್ಯೂಸ್ ಯಾನೆ ನಿತಿನ್ ಎಂಬಿವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಇಬ್ಬರು ಕರ್ನಾಟಕದಲ್ಲಿ ತಲೆಮರೆಸಿ ಕೊಂಡಿದ್ದಾರೆಂದು ಅಂದಾಜಿಸಲಾ ಗಿದೆ. ಇದೇ ವೇಳೆ ಇವರು ಕಾಸರಗೋಡಿಗೆ ತಲುಪಿರಲು ಸಾಧ್ಯತೆ ಇದೆಯೆಂದು ತಿಳಿದುಬಂದ ಹಿನ್ನೆಲೆಯಲ್ಲಿ ಇಲ್ಲಿ ಕೂಡಾ ಶೋಧ ನಡೆಸಲಾಗುತ್ತಿದೆ.  ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಸುಭದ್ರ  ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಪುತ್ರ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾಗ  ಕವಲೂರು ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕರ್ನಾಟಕದ  ಉಡುಪಿ ನಿವಾಸಿ ಶರ್ಮಿಳ ಹಾಗೂ ಆಕೆಯ ಪತಿ  ಕಾಟೂರುಪಳ್ಳಿ ಪರಂಬಿಲ್‌ನ ಮ್ಯಾಥ್ಯೂಸ್ ಯಾನೆ ನಿತಿನ್  ಎಂಬವರು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.  ಸುಭದ್ರರ ದೇಹದಲ್ಲಿದ್ದ ಚಿನ್ನಾಭರಣಗಳನ್ನು ದೋಚಲು ಅವರನ್ನು ಕೊಲೆ ನಡೆಸಿರುವುದಾಗಿ ಅಂದಾಜಿಸಲಾಗಿದೆ.  ದೋಚಲಾದ ಚಿನ್ನವನ್ನು ಆರೋಪಿಗಳು ಮಂಗಳೂರಿನಲ್ಲಿ ಅಡವಿರಿಸಿದ ಬಗ್ಗೆ ಮಾಹಿತಿ ಲಭಿಸಿದೆ. ಚಿನ್ನವನ್ನು  ಅಲ್ಲಿ ಅಡವಿರಿಸಿದ ಬಳಿಕ ಆರೋಪಿಗಳು ಕಾಸರಗೋಡಿಗೆ ತಲುಪಿರುವ ಸಾಧ್ಯತೆ ಇದೆಯೆಂದು ಅಂದಾಜಿಸಲಾಗಿದೆ.  

ಸುಭದ್ರರ ನಾಪತ್ತೆ ಬಗ್ಗೆ ಪುತ್ರ ರಾಧಾಕೃಷ್ಣನ್ ನೀಡಿದ ದೂರಿನಂತೆ ಪೊಲೀಸರು ತನಿಖ ನಡೆಸಿದಾಗ ಸುಭದ್ರ ಕವಲೂರಿಗೆ ಬಂದಿದ್ದುದಾಗಿ ತಿಳಿದುಬಂದಿದೆ. ಅಗೋಸ್ತ್ ೪ರಂದು ಎರ್ನಾಕುಳಂ ಸೌತ್‌ನಿಂದ ಓರ್ವೆ ಮಹಿಳೆಯೊಂದಿಗೆ ಸುಭದ್ರ ತೆರಳುವ ಸಿಸಿಟಿವಿ ದೃಶ್ಯ ಲಭಿಸಿದೆ.   ಜತೆಗಿದ್ದುದು ಶರ್ಮಿಳ ಎಂದು ದೃಢೀಕರಿಸಿ ಆಕೆಯ ಮನೆಗೆ ತೆರಳಿ ನೋಡಿದಾಗ ಮನೆ ಮುಚ್ಚಲಾಗಿತ್ತು. ಇದರಿಂದ ಸುಭದ್ರರಿಗಾಗಿ ಶೋಧ ಮುಂದುವರಿಸಿದ ಪೊಲೀಸರು ಶ್ವಾನದಳವನ್ನು ಸ್ಥಳಕ್ಕೆ ತಲುಪಿಸಿ ಪರಿಶೀಲಿಸಿದಾಗ ಮೃತದೇಹ ಕವಲೂರು ಕೋರ್ತುಶೇರಿಯ ಮನೆ ಹಿತ್ತಿಲಿನಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪುತ್ರ ರಾಧಾಕೃಷ್ಣನ್ ಮೃತದೇಹದ ಗುರುತು ಹಚ್ಚಿದ್ದು, ತಾಯಿಯ ದೇಹದಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿರುವುದಾಗಿ ತಿಳಿಸಿದ್ದರು.  ಸುಭದ್ರ ಹಾಗೂ ಶರ್ಮಿಳ ಮಧ್ಯೆ ಹಣ ವ್ಯವಹಾರವಿತ್ತೆಂದು ತನಿಖೆಯಲ್ಲಿ  ತಿಳಿದುಬಂದಿದೆ. ಅಲ್ಲದೆ ಸುಭದ್ರ ಶರ್ಮಿಳಳ ಮನೆಗೆ ಪದೇ ಪದೇ ಭೇಟಿ ನೀಡುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಲಭಿಸಿದ ಮಾಹಿತಿಯೇ ತನಿಖೆ ಶರ್ಮಿಳಳತ್ತ ಕೇಂದ್ರೀಕರಿಸಲು ಕಾರಣವಾಗಿದೆ. 

You cannot copy contents of this page