ವೆಳ್ಳಾಪಳ್ಳಿ ನಟೇಶನ್‌ರನ್ನು ಬೇಟೆಯಾಡಲು ಬಿಡೆವು- ಬಿಡಿಜೆಎಸ್

ಕಾಸರಗೋಡು: ಕೇರಳ ರಾಜಕೀ ಯದಲ್ಲಿ ಅಲ್ಪಸಂಖ್ಯಾತ ಕೋಮು ವಿಭಾಗದವರ ಓಲೈಕೆಯನ್ನು ಎಡ ಹಾಗೂ ಕಾಂಗ್ರೆಸ್ ಸಮಾನವಾಗಿ ನಡೆಸುತ್ತಿದೆ ಎಂಬ ಸತ್ಯವನ್ನು ಬಹಿರಂಗಪಡಿಸಿದ ಎಸ್‌ಎನ್‌ಡಿಪಿ ಯೋಗಂ ಪ್ರಧಾನ ಕಾರ್ಯದರ್ಶಿ ವೆಳ್ಳಾಪಳ್ಳಿ ನಟೇಶನ್‌ರನ್ನು ಬೇಟೆಯಾಡಲು ಯಾವುದೇ ಶಕ್ತಿಗಳಿಗೆ ಅವಕಾಶ ನೀಡಲಾಗುವುದಿಲ್ಲವೆಂದು ಬಿಡಿಜೆಎಸ್ ಕಾಸರಗೋಡು ಜಿಲ್ಲಾ ಸಮಿತಿ ಸಭೆಯಲ್ಲಿ ಬಿಡಿಜೆಎಸ್‌ಲ್ಲಾ ಅಧ್ಯಕ್ಷ ಗಣೇಶ್ ಪಾರೆಕಟ್ಟೆ ನುಡಿದರು.

ಬಿಡಿಜೆಎಸ್ ಜಿಲ್ಲಾ ಮಂಡಲ ಪದಾಧಿಕಾರಿಗಳ ಸಭೆ ಕಾಞಂಗಾಡ್ ಅತಿಥಿಗೃಹದಲ್ಲಿ ನಡೆಯಿತು. ಗಣೇಶ್  ಪಾರೆಕಟ್ಟೆ ಅಧ್ಯಕ್ಷತೆ ವಹಿಸಿದರು. ಮುಂದಿನ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಚಟುವಟಿಕೆಯನ್ನು ಬಲಪಡಿಸಲು ಸಭೆ ತೀರ್ಮಾನಿಸಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣನ್ ಕರಿಂದಳಂ, ಜಿಲ್ಲಾ ಕೋಶಾಧಿಕಾರಿ ಕುಂಞಿಕೃಷ್ಣನ್ ಕಪ್ಪಣಕ್ಕಾಲ್, ಕಾರ್ಯದರ್ಶಿ ಜೋಶಿ, ಉಪಾಧ್ಯಕ್ಷ ಪಿ.ಕೆ. ವಿಜಯನ್, ಕೃಷ್ಣನ್, ಸುರೇಂದ್ರನ್ ಕಾಞಂಗಾಡ್, ರಾಜೇಶ್ ಕಾಸರಗೋಡು, ರವಿ ಮಾತನಾಡಿದರು. ನಾರಾಯಣನ್ ಸ್ವಾಗತಿಸಿ, ಜೋಷಿ ವಂದಿಸಿದರು.

ಎಸ್‌ಎನ್‌ಡಿಪಿ ಕಾಸರಗೋಡು ಯೂನಿಯನ್ ಕೂಡಾ ವೆಳ್ಳಾಪಳ್ಳಿ ವಿರುದ್ಧ ಹೇಳಿಕೆ ನೀಡುತ್ತಿರುವುದನ್ನು ಖಂಡಿಸಿದೆ. ಈ ಬಗ್ಗೆ ನಡೆದ ಸಭೆಯಲ್ಲಿ ಯೂನಿಯನ್ ಅಧ್ಯಕ್ಷ ಕೆ. ನಾರಾಯಣ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು. ಎ.ಟಿ. ವಿಜಯನ್ ಠರಾವು ಮಂಡಿಸಿದರು. ಪಿ.ಕೆ. ವಿಜಯನ್, ಜಯಂತ ಪಚ್ಚಂಬಳ ಮಾತನಾಡಿದರು.

You cannot copy contents of this page