ವೈದ್ಯನೆಂದು ನಂಬಿಸಿ ಮಹಿಳೆಗೆ ಕಿರುಕುಳ: ರಿಮಾಂಡ್‌ನಲ್ಲಿರುವ ಪೆರ್ಲ ನಿವಾಸಿ ಆರೋಪಿಯನ್ನು ಕಸ್ಟಡಿಗೆ ತೆಗೆಯಲು ಪೊಲೀಸರಿಂದ ನ್ಯಾಯಾಲಯಕ್ಕೆ ಅರ್ಜಿ
ಕಾಸರಗೋಡು: ಕಾಞಂಗಾಡ್ ನಲ್ಲಿ ಗೃಹಿಣಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್ ನಲ್ಲಿರುವ ನಕಲಿ ವೈದ್ಯನನ್ನು ಹೆಚ್ಚಿನ ತನಿಖೆ ನಡೆಸಲು ತಮ್ಮ ಕಸ್ಟಡಿಗೆ ಬಿಟ್ಟುಕೊಡಬೇಕೆಂದು ಒತ್ತಾಯಿಸಿ ಪೊಲೀಸರು ನ್ಯಾಯಾಲಯಕ್ಕ್ಲೆ ಅರ್ಜಿ ಸಲ್ಲಿಸಿದ್ದಾರೆ.
ಪೆರ್ಲ ನಿವಾಸಿಯೂ ಕಣ್ಣೂರು ಕಕ್ಕಾಟ್, ತಳಿಪರಂಬದಲ್ಲಿ ವಾಸಿಸು ತ್ತಿದ್ದ ಶಿಹಾಬುದ್ದೀನ್ (55)ಎಂಬಾತ ನನ್ನು ಕಸ್ಟಡಿಗೆ ತೆಗೆಯಲು ಹೊಸದುರ್ಗ ಠಾಣೆ ಇನ್ ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕಿರುಕುಳ ಪ್ರಕರಣದಲ್ಲಿ ಸೆರೆಗೀ ಡಾದ ಆರೋಪಿ ಈಗ ರಿಮಾಂಡ್‌ನಲ್ಲಿ ದ್ದಾನೆ. ಕಿರುಕುಳಕ್ಕೊಳಗಾದ ಮಹಿಳೆಯ ಇಬ್ಬರು ಮಕ್ಕಳನ್ನು ತಳಿಪರಂಬದ ಮನೆಗೆ ತಲುಪಿಸಿರುವುದಾಗಿಯೂ ಪೊಲೀಸರಿಗೆ ಮಾಹಿತಿ ಲಭಿಸಿದೆ. ಕಿರುಕುಳಕ್ಕೊಳ ಗಾದ ಮಹಿಳೆಯ ಮಕ್ಕಳಿಗೆ ಬಾಧಿಸಿದ ರೋಗವನ್ನು ಗುಣಪಡಿಸುವುದಾಗಿ ನಂಬಿಸಿ ಶಿಹಾಬುದ್ದೀನ್ ಮಹಿಳೆಯ ಕುಟುಂಬವನ್ನು ಸಂಪರ್ಕಿಸಿ ಸ್ನೇಹ ಬೆಳೆಸಿಕೊಂಡಿದ್ದನು. ಬಳಿಕ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಹಿಳೆಯ ಮನೆಗೆ ತಲುಪಿ ನಕಲಿ ಚಿಕಿತ್ಸೆ ನೀಡಿದ ಆರೋಪಿಯು ಮಹಿಳೆ, ಆಕೆಯ ಪತಿ ಹಾಗೂ ಮೂವರು ಮಕ್ಕಳಲ್ಲಿ ತನಗೆ ಮಂತ್ರವಾದದ ಶಕ್ತಿಯಿದೆಯೆಂದು ನಂಬಿಸಿ ಅವರನ್ನು ವಶೀಕರಿಸಿ ತಳಿಪರಂಬಕ್ಕೆ ವಾಸ ಬದಲಿಸುವಂತೆ ಮಾಡಿದ್ದನು. ದೂರುದಾತೆಯಾದ ಮಹಿಳೆಯ ಇಬ್ಬರು ಹೆಣ್ಮಕ್ಕಳ ಪತಿಯಂದಿರು ಗಲ್ಫ್‌ನಲ್ಲಿದ್ದರು. ಅವರು ಊರಿಗೆ ಮರಳಿ ಬಂದಾಗಲೇ ಕುಟುಂಬ ತಳಿಪರಂಬದ ನಕಲಿ ವೈದ್ಯನ ಮನೆಗೆ ವಾಸ ಬದಲಿಸಿದ ವಿಷಯ ತಿಳಿದುಬಂದಿದೆಯೆಂದು ಹೇಳಲಾಗುತ್ತಿದೆ.
ಮಹಿಳೆ ನೀಡಿದ ದೂರಿನಲ್ಲ್ಲಿ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿ ಶಿಹಾಬುದ್ದೀನ್ ನನ್ನು ಬಂಧಿಸಿದ್ದರು. ತನಿಖೆ ನಡೆಸುತ್ತಿರುವ ಮಧ್ಯೆ ಆರೋಪಿ ಎದೆನೋವೆಂದು ತಿಳಿಸಿದ್ದು, ಇದರಿಂದ ಪೊಲೀಸ್ ಕಾವಲಿನಲ್ಲಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಆರೋಪಿಯನ್ನು ರಿಮಾಂಡ್‌ನಲ್ಲಿರಿಸಲಾಗಿತ್ತು. ಇದರಿಂದ ಆತನನ್ನು ಸಮಗ್ರವಾಗಿ ತನಿಖೆಗೊಳ ಪಡಿಸಲು ಸಾಧ್ಯವಾಗಲಿಲ್ಲವೆಂದು ತಿಳಿಸಿ ಆರೋಪಿಯನ್ನು ತಮ್ಮ ಕಸ್ಟಡಿಗೆ ಬಿಟ್ಟುಕೊಡಬೇಕೆಂದು ವಿನಂತಿಸಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಇದೇ ವೇಳೆ ಶಿಹಾಬುದ್ದೀನ್ ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳ ವಿವಿಧೆಡೆಗಳಲ್ಲಿ ಇದೇ ರೀತಿಯ ವಂಚನೆ ನಡೆಸಿರುವುದಾಗಿ ಪೊಲೀಸರಿಗೆ ಸೂಚನೆ ಲಭಿಸಿದೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಇದೇ ರೀತಿಯ ವಂ ಚನೆ ನಡೆದಿರುವುದಾಗಿ ಮಾಹಿತಿಯಿ ದೆಯೆಂದು ಪೊಲೀಸರು ತಿಳಿಸುತ್ತಿದ್ದಾರೆ.