ವೈದ್ಯರ ವೇಷದಲ್ಲಿ ತಲುಪಿ ಆಸ್ಪತ್ರೆಯಿಂದ ನವಜಾತ ಶಿಶುವಿನ ಅಪಹರಣ
ಬೆಂಗಳೂರು: ವೈದ್ಯರ ವೇಷದಲ್ಲಿ ತಲುಪಿದ ಯುವತಿಯರು ನವಜಾತ ಶಿಶುವನ್ನು ಅಪಹರಿಸಿದ ಘಟನೆ ನಡೆದಿದೆ. ಕಲ್ಬುರ್ಗಿ ಜಿಲ್ಲಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ವೈದ್ಯರ ವೇಷದಲ್ಲಿ ತಲುಪಿದ ಮೂವರು ಯುವತಿಯರು ಆಸ್ಪತ್ರೆಯಿಂದ ಮಗುವನ್ನು ಅಪಹರಿಸಿಕೊಂಡೊಯ್ದಿ ದ್ದಾರೆ. ಈ ಬಗ್ಗೆ ದೂರು ಲಭಿಸಿದ ತಕ್ಷಣ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ೨೪ ಗಂಟೆಗಳೊಳಗೆ ಮಗುವನ್ನು ಪತ್ತೆಹಚ್ಚಿದ್ದಾರೆ. ಅಲ್ಲದೆ ಮೂವರು ಯುವತಿಯರನ್ನೂ ಸೆರೆ ಹಿಡಿಯಲಾಗಿದೆ. ಆಸ್ಪತ್ರೆಯ ಸಿಸಿ ಟಿವಿ ದೃಶಗಳ ಪೊಲೀಸರ ತನಿಖೆಗೆ ಸಹಾಯಕವಾಯಿತು. ಸೆರೆಗೀಡಾದ ಯುವತಿಯರು ಮಾನವಸಾಗಾಟ ದಂಧೆಯ ಸದಸ್ಯೆಯರಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರಿಗೆ ಸಂಶಯವುಂಟಾ ಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.