ಮಂಜೇಶ್ವರ: ಕಾಪಾ ಸಹಿತ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿ ಗಡಿಪಾರು ಮಾಡಿದ್ದ ಆರೋಪಿ ಸಹಿತ ಇಬ್ಬರನ್ನು ವ್ಯಕ್ತಿಗೆ ಕೊಲೆ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಸೆರೆಹಿಡಿಯಲಾಗಿದೆ. ನಿನ್ನೆ ಘಟನೆ ನಡೆದಿದೆ. ಕಡಂಬಾರ್ ವಿಲ್ಲೇಜ್‌ನ ಮೊರತ್ತಣೆ ಕಜೆಕೋಡಿ ಹೌಸ್ ನಿವಾಸಿ ಕರ್ನಾಟಕ, ಮಂಜೇಶ್ವರ ಸಹಿತ ವಿವಿಧ ಠಾಣೆಗಳಲ್ಲಿ 10ರಷ್ಟು ಪ್ರಕರಣದಲ್ಲಿ ಆರೋಪಿಯಾದ ಕುಖ್ಯಾತ ಕಾಪಾ ಆರೋಪಿ ಮೊಹಮ್ಮದ್ ಅಸ್ಕರ್ (29), ಮೂರು ಪ್ರಕರಣದಲ್ಲಿ ಆರೋಪಿಯಾಗಿರುವ ವರ್ಕಾಡಿ ವಿಲ್ಲೇಜ್, ಮೊರತ್ತಣೆ ತಚ್ಚಿರೆಪದವು ನಿವಾಸಿ ಮುಹಮ್ಮದ್ ಹುಸೈನ್ (29)ನನ್ನು ನಿನ್ನೆ ಮೊರತ್ತಣೆಯ ನಿರ್ಜನ ಪ್ರದೇಶದಲ್ಲಿ ಅಡಗಿದ್ದ ವೇಳ ಸೆರೆಹಿಡಿಯಲಾಗಿದೆ. ಇವರಿಬ್ಬರೂ ಹಾಗೂ ಇನ್ನಿಬ್ಬರು ಸೇರಿ ನಾಲ್ಕು ಮಂದಿಯ ತಂಡ ಬೇರಿಕೆ ನಿವಾಸಿ ಅಬೂಬಕರ್ ಸಿದ್ದಿಖ್‌ನ ಮನೆಗೆ ನಿನ್ನೆ ಬೆಳಿಗ್ಗೆ ಅತಿಕ್ರಮಿಸಿ ನುಗ್ಗಿ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ತಲವಾರು ಬೀಸಿ ಕೊಲೆ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಸೆರೆಹಿಡಿಯಲಾಗಿದೆ. ಆದರೆ ಇಬ್ಬರು ಪರಾರಿಯಾಗಿದ್ದಾರೆ. ಅವರಿಗಾಗಿ ಶೋಧ ನಡೆಯುತ್ತಿದೆ. ಕಾರಿನ ವಿಷಯದಲ್ಲಿ ಅಬೂಬಕರ್ ಸಿದ್ದಿಖ್ ಹಾಗೂ ತಂಡದ ಮಧ್ಯೆ ವಾಗ್ವಾದ ನಡೆದಿತ್ತೆನ್ನಲಾಗಿದ್ದು, ಆ ಬಳಿಕ ತಂಡ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದೆ. ಬಳಿಕ ಮಂಜೇಶ್ವರ ಠಾಣೆಗೆ ನೀಡಿದ ದೂರಿನಂತೆ ಪೊಲೀಸರು ತಲುಪಿ ಆರೋಪಿಗಳಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ಮೊರತ್ತಣೆಯ ನಿರ್ಜನ ಪ್ರದೇಶದಲ್ಲಿ ಆರೋಪಿಗಳು ಅಡಗಿ ಕುಳಿತ ಬಗ್ಗೆ ತಿಳಿದುಬಂದಿದ್ದು, ಅಲ್ಲಿಂದ ಇಬ್ಬರನ್ನು ಸೆರೆಹಿಡಿಯಲಾಗಿದೆ. ಆದರೆ ಇಬ್ಬರು ಪರಾರಿಯಾಗಿದ್ದಾರೆ.
ಮಂಜೇಶ್ವರ ಠಾಣೆ ಸಿ.ಐ ರಾಜೀವ್ ಕುಮಾರ್‌ರ ನೇತೃತ್ವದಲ್ಲಿ ಎಸ್‌ಐಗಳಾದ ನಿಖಿಲ್, ಸುಮೇ ಶ್‌ರಾಜ್, ಚಾಲಕ ಪ್ರಶೋಬ್ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.