ವ್ಯಾಪಾರಿ ಕುಸಿದುಬಿದ್ದು ಮೃತ್ಯು

ಕುಂಬಳೆ: ವ್ಯಾಪಾರಿಯೊಬ್ಬರು ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟರು. ಕುಂಬಳೆ ದೇವಿನಗರ ಗಟ್ಟಿ ಸಮಾಜ ರಸ್ತೆಯಲ್ಲಿ ನಿತ್ಯ ನಿಲಯದ ನಾಗಪ್ಪ ಗಟ್ಟಿ (72) ಮೃತಪಟ್ಟ ವ್ಯಕ್ತಿ. ಇವರು ಕುಂಬಳೆಯಲ್ಲಿ ನಿತ್ಯಾನಂದ ವಾಚ್ ವರ್ಕ್ಸ್ ಸಂಸ್ಥೆ ನಡೆಸುತ್ತಿದ್ದರು. ನಿನ್ನೆ ಬೆಳಿಗ್ಗೆ ಇವರು ಕುಟುಂಬ ಸಹಿತ ಮಾಣಿಲ ಕ್ಷೇತ್ರಕ್ಕೆ ತೆರಳಿದ್ದರು. ಸಂಜೆ ೪.೩೦ರ ವೇಳೆ ಮರಳಿ ಮನೆಗೆ ತಲು ಪಿದ್ದರು. ಅಲ್ಪ ಹೊತ್ತಿನಲ್ಲಿ ಅಸೌಖ್ಯ ಕಾಣಿಸಿಕೊಂಡು ನಾಗಪ್ಪ ಗಟ್ಟಿ ಕುಸಿದುಬಿದ್ದಿದ್ದರು. ಕೂಡಲೇ  ಕುಂಬಳೆಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಮೃತರು ಪತ್ನಿ ಗಿರಿಜಾ, ಮಕ್ಕಳಾದ ಪ್ರಸಾದ್, ಪ್ರತಿಮ, ಪ್ರಕಾಶ್, ಪ್ರಮಿದ, ಅಳಿಯ-ಸೊಸೆಯಂದಿರಾದ  ನಿತಿನ್, ಪೂಜಾ, ರಶ್ಮಿತ್, ಸಹೋದರರಾದ ದಾಮೋದರ, ಚಂದ್ರಶೇಖರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page