ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯಿಂದ ಮುಷ್ಕರ ಘೋಷಣೆ ಸಮಾವೇಶ

ಕಾಸರಗೋಡು: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡಿನಲ್ಲಿ ಮುಷ್ಕರ ಘೋಷಣೆ ಸಮಾವೇಶ ಜರಗಿತು. ರಾಜ್ಯಾಧ್ಯಕ್ಷ ರಾಜು ಅಪ್ಸರ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಅಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಸ್ಯ ಮೇಚೇರಿ, ಉಪಾಧ್ಯಕ್ಷರಾದ ಬಾಬು ಕೋಟ್ಟ ಯಿಲ್, ಪಿ.ಕೆ. ಬಾಪು ಹಾಜಿ, ಜಿಲ್ಲಾ ಕೋಶಾಧಿಕಾರಿ ಮಾಹಿನ್ ಕೋಳಿಕ್ಕರ, ಪಿ.ಪಿ. ಮುಸ್ತಫ, ರೇಖಾ ಮೋಹನ್ ದಾಸ್, ಕೆ. ಸತ್ಯಕುಮಾರ್ ಮಾತನಾಡಿ ದರು. ಸಿನಿಮಾ ನಿರ್ದೇಶಕಿ, ನಟಿ ಯಾಗಿರುವ ಆದಿತ್ಯಬೇಬಿಯವರನ್ನು ಅಭಿನಂದಿಸಲಾಯಿತು. ವಯನಾಡು ವಿಕೋಪ ಪರಿಹಾರ ನಿಧಿಗೆ ರಾಜ್ಯದಲ್ಲೇ ಅತ್ಯಂತ ಹೆಚ್ಚು ಮೊತ್ತವಾದ 10 ಲಕ್ಷ ರೂ.ವನ್ನು ನೀಡಿದ ನೀಲೇಶ್ವರ ಘಟಕವನ್ನು ಅಭಿನಂದಿಸಲಾಯಿತು. ಟ್ರೇಡರ್ಸ್ ಫ್ಯಾಮಿಲಿ ವೆಲ್ಫೇರ್ ಬೆನಿಫಿಟ್ ಸ್ಕೀಂನ ಚೆಕ್ ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಸಜಿ ಸ್ವಾಗತಿಸಿ, ಜಿಲ್ಲಾ ಉಪಾಧ್ಯಕ್ಷ ಎ.ಎ. ಅಸೀಸ್ ವಂದಿಸಿದರು.

You cannot copy contents of this page