ಮಂಜೇಶ್ವರ: ವ್ಯಾಪಾರಿಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಕೇಂದ್ರ, ರಾಜ್ಯ ಸರಕಾರಗಳು ಗಮನ ಹರಿಸದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಗೆ ಇದಿರೇಟು ನೀಡಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಿತಿ ರೂಪೀಕರಿಸಿ ಕಾರ್ಯನಿರ್ವಹಿಸಲು ತೀರ್ಮಾ ನಿಸಿರುವಂತೆ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಸಮಿತಿ ರೂಪೀಕರಣ ಸಭೆ ನಡೆಯಿತು. ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಸಮಿತಿ ಖಜಾಂಚಿ ಮಾಹಿನ್ ಕೋಳಿಕ್ಕರ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಅಧ್ಯಕ್ಷ ಕೆ. ಅಹಮ್ಮದ್ ಶರೀಫ್ ಉದ್ಘಾಟಿಸಿದರು. ಸಮಿತಿಗೆ ಅಧ್ಯಕ್ಷರಾಗಿ ಮಾಹಿನ್ ಕೋಳಿಕ್ಕರ, ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಕನಿಲ, ಕೋಶಾಧಿಕಾರಿಯಾಗಿ ಹಸೈನಾರ್ ಉದ್ಯಾವರ ಆಯ್ಕೆಯಾ ಗಿದ್ದಾರೆ. ಸತ್ತಾರ್ ಆರಿಕ್ಕಾಡಿ, ಬಶೀರ್ ಕಲ್ಲಂಗೈ, ಅಶ್ರಫ್, ಕೆ. ಸಜಿ ಮಾತನಾಡಿದರು. ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ಘಟಕದ ವ್ಯಾಪಾರಿ ಕಾರ್ಯಕರ್ತರು ಭಾಗವಹಿಸಿದರು.
