ಶಬರಿಮಲೆ ಕ್ಷೇತ್ರ ಮುಖ್ಯ ಅರ್ಚಕರಾಗಿ ಪಿ.ಎನ್. ಮಹೇಶ್ ಆಯ್ಕೆ

ಶಬರಿಮಲೆ: ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರದ ಮುಖ್ಯ ಅರ್ಚಕರಾಗಿ ಮುವಾಟುಪುಳ ಪುತ್ತಿಲ್ಲತ್ತ್ ಮನದ ಪಿ.ಎನ್. ಮಹೇಶ್, ಮಾಳಿಗಪುರಂ ಮುಖ್ಯ ಅರ್ಚಕನಾಗಿ ತೃಶೂರು ವಡಕ್ಕೇಕಾಡ್‌ನ ನಿವಾಸಿ ಪಿ.ಜಿ. ಮುರಳಿ ಆಯ್ಕೆಗೊಂಡಿದ್ದಾರೆ. ಪಿ.ಎನ್. ಮಹೇಶ್ ಪ್ರಸ್ತುತ ತೃಶೂರು ಪಾರಮೇಕಾವ್ ಕ್ಷೇತ್ರದ ಮುಖ್ಯ ಅರ್ಚಕರಾಗಿದ್ದಾರೆ. ಮುಂದಿನ ಮಂಡಲ ಮಕರಜ್ಯೋತಿ ತೀರ್ಥಾಟನೆ ಕಾಲದಲ್ಲಿ ನೂತನ ಮುಖ್ಯ ಅರ್ಚಕರು ಪೂಜೆ ನಡೆಸಲಿದ್ದಾರೆ. ಪಂದಳ ಅರಮನೆಯ ವೈದೇಹ್ ವರ್ಮ ಹಾಗೂ ನಿರುಪಮ ಜಿ. ವರ್ಮ ಎಂಬೀ ಮಕ್ಕಳು ಚೀಟಿ ಎತ್ತುವ ಮೂಲಕ ಶಬರಿಮಲೆ ಹಾಗೂ ಮಾಳಿಗಪುರಂ ಕ್ಷೇತ್ರಗಳ ಮುಖ್ಯ ಅರ್ಚಕರನ್ನು ಆರಿಸಲಾಯಿತು.  ಶಬರಿಮಲೆ ಶ್ರೀ ಧರ್ಮ ಶಾಸ್ತಾ ಕ್ಷೇತ್ರದಲ್ಲಿ ತುಲಾಮಾಸ   ಪೂಜೆಯ ಅಂಗವಾಗಿ ನಿನ್ನೆ ಸಂಜೆ ೫ಕ್ಕೆ ಕ್ಷೇತ್ರ ಬಾಗಿಲು ತೆರೆಯಲಾ ಯಿತು. ತಂತ್ರಿ ಕಂಠರರ್ ಮಹೇಶ್ ಮೋಹನರ್‌ರ ಉಪಸ್ಥಿತಿಯಲ್ಲಿ ಮುಖ್ಯ ಅರ್ಚಕ ಕೆ. ಜಯರಾಮನ್ ನಂಬೂದಿರಿ ಕ್ಷೇತ್ರ ಬಾಗಿಲು ತೆರೆದು ದೀಪ ಬೆಳಗಿಸಿದರು. ಮಾಳಿಗಪುರಂ ಮುಖ್ಯ ಅರ್ಚಕ ಎ. ಹರಿಹರನ್ ನಂಬೂದಿರಿ ಮಾಳಿಗಪುರಂ ಕ್ಷೇತ್ರ ಬಾಗಿಲು ತೆರೆದರು. ನಿನ್ನೆ ಯಾವುದೇ ಪೂಜೆಗಳಿರಲಿಲ್ಲ. ಇಂದು ಮುಂಜಾನೆ ೫ಕ್ಕೆ ಬಾಗಿಲು ತೆರೆದು ನಿರ್ಮಾಲ್ಯಂ ಬಳಿಕ ಅಭಿಷೇಕ, ಮಹಾಗಣಪ ತಿಹೋಮ, ತುಪ್ಪಾಭಿಷೇಕ, ಉಷಃಪೂಜೆ ನಡೆಯಿತು. ಇಂದಿನಿಂದ ಅ. ೨೨ರ ವರೆಗೆ ಭಕ್ತರಿಗೆ ದರ್ಶನಕ್ಕೆ ಅಕಾಶವಿರುವುದು.

RELATED NEWS

You cannot copy contents of this page