ಶಬರಿಮಲೆಯಲ್ಲಿ ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
ಕೊಚ್ಚಿ: ಶಬರಿಮಲೆಗೆ ಮೊಬೈಲ್ ಫೋನ್ ತರುವುದನ್ನು ತಡೆಯಲಾ ಗಿದ್ದರೂ ಸೋಪಾನ ದಲ್ಲಿ ಗರ್ಭಗು ಡಿಯ ಮುಂದೆ ಭಕ್ತರು ಮೊಬೈಲ್‌ನಲ್ಲಿ ಚಿತ್ರೀಕರಿ ಸುವುದನ್ನು ನಿಯಂತ್ರಿಸಬೇಕೆಂದು ಹೈಕೋರ್ಟ್ ತಿಳಿಸಿದೆ. ಹದಿನೆಂಟು ಮೆಟ್ಟಿಲಿನಲ್ಲಿ ಪೊಲೀಸರು ಅಯ್ಯ ಪ್ಪನಿಗೆ ಬೆನ್ನುಹಾಕಿ ನಿಂತು ಫೋಟೋ ತೆಗೆದಿರುವ ಬಗ್ಗೆ ನ್ಯಾಯಾಲಯದ ವರದಿ ಆಗ್ರಹಿಸಿದೆ. ಪೊಲೀಸರ ಸೇವೆ ಇಲ್ಲಿ ಸ್ತುತ್ಯಾರ್ಹವಾಗಿದ್ದರೂ ಈ ರೀತಿಯಲ್ಲಿ ವ್ಯವಹರಿಸುವುದು ಸೂಕ್ತವಲ್ಲ ಎಂದು ಜಸ್ಟೀಸ್ ಅನಿಲ್ ಕೆ ನರೇಂದ್ರನ್ ಹಾಗೂ ಜಸ್ಟೀಸ್ ಎಸ್. ಮುರಳೀಕೃಷ್ಣ ಸೇರಿದ ಪೀಠ ಅಭಿಪ್ರಾಯಪಟ್ಟಿದೆ.