ಶವರ್ಮ ಸೇವಿಸಿ ಚಿಕಿತ್ಸೆಯಲ್ಲಿದ್ದ ಅಧ್ಯಾಪಿಕೆ ಮೃತ್ಯು

ಚೆನ್ನೈ: ರೆಸ್ಟೋರೆಂಟ್‌ನಿಂದ ಶವರ್ಮ ಸೇವಿಸಿದ ಹಿನ್ನೆಲೆಯಲ್ಲಿ ಆಹಾರ ವಿಷಬಾಧೆ ತಗಲಿ ಯುವತಿ ಮೃತಪಟ್ಟರು. ಚೆನ್ನೈ ತಿರುವೀತಿ ಅಮ್ಮನ್ ಸ್ಟ್ರೀಟ್‌ನಲ್ಲಿ ವಾಸಿಸುವ ಖಾಸಗಿ ಶಾಲೆಯ ಅಧ್ಯಾಪಿಕೆ ಶ್ವೇತ (22) ಮೃತಪಟ್ಟ ಯುವತಿ. ಒಂದು ವಾರದ ಹಿಂದೆ ಸಹೋದರನ ಜೊತೆಗೆ ಹೊರಗೆ ಹೋದಾಗ ಶ್ವೇತ ಶವರ್ಮ ಸೇವಿಸಿದ್ದರು. ಮನೆಗೆ ತಲುಪಿದ ಬಳಿಕ ಮೀನು ಪದಾರ್ಥವನ್ನು ಸೇವಿಸಿದ್ದು, ಆ ಬಳಿಕ ವಾಂತಿ ಆರಂಭಗೊಂಡಿ ತ್ತೆನ್ನಲಾಗಿದೆ. ಪ್ರಜ್ಞಾಹೀನೆಯಾದ ಯುವತಿಯನ್ನು ಕೂಡಲೇ ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಸ್ಟ್ಯಾನ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಚಿಕಿತ್ಸೆಯಲ್ಲಿರುವ ಮಧ್ಯೆ ಸಾವು ಸಂಭವಿಸಿದೆ. ಸಾವಿಗೆ ಕಾರಣವೇ ನೆಂದು ಪತ್ತೆಹಚ್ಚಲು ಪೋಸ್ಟ್ ಮಾರ್ಟಂ ವರದಿಗೆ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ನಾಮಕ್ಕಲ್ ಜಿಲ್ಲೆಯಲ್ಲಿ ಶವರ್ಮ ಸೇವಿಸಿದ ೧೩ರ ಹರೆಯದ ಬಾಲಕಿ ಮೃತಪಟ್ಟಿದ್ದಳು.

You cannot copy contents of this page