ಶಾಂತಿಗುರಿ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶಾಭಿಷೇಕ: ಹೊರೆಕಾಣಿಕೆ ಮೆರವಣಿಗೆ, ಧಾರ್ಮಿಕ ಸಭೆ

ಉಪ್ಪಳ: ಬೇಕೂರು ಬಳಿಯ ಶಾಂತಿಗುರಿ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶ್ರೀ ದೇವಿಯ ಪೀಠ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮತ್ತು ಸಪರಿವಾರ ದೈವಗಳ ಪ್ರತಿಷ್ಠೆ ಕಲಶಾಭಿಷೇಕ ಇಂದು ನಡೆಯಿತು. ಬೆಳಿಗ್ಗೆ ಬ್ರಹ್ಮಶ್ರೀ ನಡಿಬೈಲು ಶಂಕರ ನಾರಾಯಣ ತಂತ್ರಿವರ್ಯ ಪೌರೋ ಹಿತ್ಯ ವಹಿಸಿದರು. ನಿನ್ನೆ ಸಂಜೆ ನಡೆದ ಧಾರ್ಮಿಕ ಸಬೆsಯಲ್ಲಿ ಮುಂಬಯಿ ಉದ್ಯಮಿ ಸಂಜೀವ ಶೆಟ್ಟಿ ತಿಂಬರ ಅಧ್ಯಕ್ಷತೆ ವಹಿಸಿದರು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಮಂಗಲ್ಪಾಡಿ ಮನೆಯ ಯಜಮಾನ ಡಾ. ಕೌಶಿಕ್ ಶೆಟ್ಟಿ, ಆರ್.ಎಸ್.ಎಸ್ ಮುಖಂಡ ಲೊಕೇಶ್ ಜೋಡುಕಲ್ಲು, ಪಂಚಾಯತ್ ಸದಸ್ಯೆ ಸುಜಾತ ಶೆಟ್ಟಿ, ಐಲ ಕ್ಷೇತ್ರದ ಮೊಕ್ತೇಸರ ಸುಕುಮಾರ್ ಉಪ್ಪಳ, ಅಂಬಾರು ಶ್ರೀ ಸದಾಶಿವ ಕ್ಷೇತ್ರದ ಆಡಳಿತ ಮೊಕ್ತೇಸರ ಎಚ್.ಕೆ ಶೆಟ್ಟಿ, ಕುಬಣೂರು ಶ್ರೀ ಶಾಸ್ತಾವು ಕ್ಷೇತ್ರದ ಗೌರವಾಧ್ಯಕ್ಷ ಅಶೋಕ್ ಕುಮಾರ್ ಹೊಳ್ಳ, , ಪ್ರತಾಪನಗರ ಶ್ರೀ ಗಾಯತ್ರಿ ವಿಶ್ವಕರ್ಮ ಭಜನಾ ಮಂದಿರದ ಅಧ್ಯಕ್ಷ ಶಿವಾನಂದ ಆಚಾರ್ಯ, ಯಕ್ಷಸಿರಿ ಪ್ರಶಸ್ತಿ ಪುರಸ್ಕöÈತ ರಾಮ ಸಾಲಿಯಾನ್ ಪ್ರತಾಪನಗರ, ಅಧ್ಯಾಪಕ ಹರೀಶ್ ಸುಲಾಯ ಒಡ್ಡಂಬೆಟ್ಟು ಉಪಸ್ಥಿ ತರಿದ್ದರು. ಶ್ರೀ ಕ್ಷೇತ್ರದಲ್ಲಿ ಎಂಟು ವರ್ಷಗಳಿಂದ ದೇವರ ಸೇವೆ ಮಾಡುತ್ತಿರುವ ವಿಜಯ ಸಂಜೀವ ಪೂಜಾರಿ ಇವರನ್ನು ಸನ್ಮಾನಿ ಸಲಾಯಿತು. ಶಮಿತಾ ಆರ್. ಆಳ್ವ ಪ್ರಾರ್ಥನೆ ಹಾಡಿದರು. ಸಮಿತಿ ಪ್ರಧಾನ ಸಂಚಾಲಕ ಯಾದವ ಕೀರ್ತೇಶ್ವರ ಸ್ವಾಗತಿಸಿ, ಮಾತೃ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನ್ನಪೂರ್ಣೇಶ್ವರಿ ರೈ ವಂದಿಸಿದರು. ಸಂಚಾಲಕಿ ಉಷಾ ಉದಯ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಮಲಾಕ್ಷ ಐಲ ಮತ್ತು ಪದ್ಮ ಮೋಹನ್‌ದಾಸ್ ಐಲ ನಿರೂಪಿಸಿದರು. ಇಂದು ಸಂಜೆ 6ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಶಂಕರನಾರಾಯಣ ತಂತ್ರಿ ನಡಿಬೈಲು, ಶಿಲ್ಪಿ ರಮೇಶ ಕಾರಂತ ಬೆದ್ರಡ್ಕ ಹಾಗೂ ವಿವಿಧ ಗಣ್ಯರು ಉಪಸ್ಥಿತರಿರುವರು. ಸಮಿತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸುವರು.

You cannot copy contents of this page