ಶಾಲಾ ಬಸ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಸಾವು

ಕುಂಬಳೆ: ಶಾಲಾ ಬಸ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂU ಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿ ಸಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿ ಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.

ಕುಂಬಳೆಗೆ ಸಮೀಪದ ಸೂರಂ ಬೈಲು ಅನಿಲ್ ಕುಮಾರ್- ಪ್ರೇಮ ದಂಪತಿ ಪುತ್ರ ಜಿ.ಕೆ. ನಗರದ ಲೈಟ್ ಆಂಡ್ ಸೌಂಡ್ ಸಂಸ್ಥೆಯೊಂದರ ಕಾರ್ಮಿಕ ಅವಿನಾಶ್ (21) ಸಾವನ್ನಪ್ಪಿದ ದುರ್ದೈವಿ ಯುವಕ.

ಅವಿನಾಶ್ ಕೆಲಸದ ನಿಮಿತ್ತ ಎಪ್ರಿಲ್ ೧೯ರಂದು ಪೊವ್ವಲ್‌ಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಉದಯಗಿರಿ ಬಳಿ ಖಾಸಗಿ ಶಾಲೆಯೊಂದರ ಬಸ್ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವಿನಾಶ್‌ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತಾದರೂ, ಅದು ಫಲಕಾರಿಯಾಗದೆ ಅವರು ನಿನ್ನೆ ಅಸುನೀಗಿದ್ದಾರೆ. ಮೃತರು ಹೆತ್ತವರ ಹೊರತಾಗಿ ಸಹೋದರರಾದ ಅಭಿಲಾ ಷ್, ಅಜಯ್, ಅಜಿತ್ ಹಾಗೂ ಅವರ ಬಂಧು-ಮಿತ್ರರನ್ನು ಅಗಲಿದ್ದಾರೆ. ವಿದ್ಯಾನಗರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದರು.

RELATED NEWS

You cannot copy contents of this page