ಶಾಲೆ ವಿದ್ಯಾರ್ಥಿಗಳಿಂದ ಅಧ್ಯಾಪಕರ ಪಾದಪೂಜೆ: ಬಂದಡ್ಕದಲ್ಲಿ ವಿವಾದ ಕಾರ್ಯಕ್ರಮ
ಬಂದಡ್ಕ: ಬಂದಡ್ಕದಲ್ಲಿ ವಿದ್ಯಾರ್ಥಿಗಳಿಂದ ಅಧ್ಯಾಪಕರ ಪಾದಪೂಜೆ ಮಾಡಿಸಿದ ಘಟನೆ ವಿವಾದವಾಗುತ್ತಿದೆ. ಬಂದಡ್ಕ ಕಕ್ಕೆಚ್ಚಾಲ್ ಸರಸ್ವತಿ ವಿದ್ಯಾಲಯದಲ್ಲಿ ಕಾರ್ಯಕ್ರಮ ನಡೆದಿತ್ತು. ಗುರುಪೂರ್ಣಿಮೆ ಎಂಬ ಹೆಸರಲ್ಲಿ ಈ ಕಾರ್ಯಕ್ರಮ ನಡೆದಿರುವುದಾಗಿ ಹೇಳಲಾಗುತ್ತಿದೆ. ಗುರುವಾರ ಬೆಳಿಗ್ಗೆ ವ್ಯಾಸಜಯಂತಿ ದಿನದಂಗವಾಗಿ ನಿವೃತ್ತರಾದ ಅಧ್ಯಾಪಕರನ್ನು ವಿದ್ಯಾಲಯ ಸಮಿತಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳನ್ನು ನೆಲದಲ್ಲಿ ಕುಳ್ಳಿರಿಸಿ ಕುರ್ಚಿಯಲ್ಲಿ ಕುಳಿತ ಅಧ್ಯಾಪಕರ ಪಾದ ತೊಳೆದು ಹೂಗಳನ್ನು ಸಮರ್ಪಿಸಿ ಪೂಜೆ ಮಾಡಿ ವಂದಿಸುವುದು ಕಾರ್ಯಕ್ರಮವಾಗಿತ್ತು. ವಿದ್ಯಾಲಯದ ವ್ಯಾಪ್ತಿಯ ನಿವೃತ್ತ 30 ಅಧ್ಯಾಪಕರ ಪಾದಪೂಜೆ ಈ ವೇಳೆ ನಡೆಸಲಾಗಿದೆ. ಆದರೆ ಮಕ್ಕಳಿಂದ ಈ ರೀತಿಯ ಕಾರ್ಯಕ್ರಮ ಮಾಡಿಸಿರುವುದು ವಿವಾದಕ್ಕೆ ಹೇತುವಾಗಿದೆ.