ಶಾಸಕ ಪಿ.ವಿ. ಅನ್ವರ್  ತೃಣಮೂಲ ಕಾಂಗ್ರೆಸ್‌ಗೆ

ಮಲಪ್ಪುರಂ: ಸಿಪಿಎಂ ಬೆಂಬಲಿತ ಪಕ್ಷೇತರ ಉಮೇದ್ವಾರ ರಾಗಿ ಗೆದ್ದು ಬಂದ ಶಾಸಕ ಪಿ.ವಿ. ಅನ್ವರ್ ಅವರು ತೃಣಮೂಲ ಕಾಂಗ್ರೆಸ್‌ಗೆ ಸೇರಲು ತೀರ್ಮಾನಿಸಿ ದ್ದಾರೆ. ಇದರಂತೆ ಅವರು ನಿನ್ನೆ ಸಂಜೆ ಕೊಲ್ಕತ್ತದಲ್ಲಿ ತೃಣಮೂಲ ಕಾಂಗ್ರೆಸ್‌ನ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅವರನ್ನು ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯವರು ಸ್ವಾಗತಿಸಿ, ತೃಣಮೂಲ ಕಾಂಗ್ರೆಸ್‌ನ ಕೇರಳ ಘಟಕದ ಸಂಚಾಲಕ ಸ್ಥಾನದ ಹೊಣೆಗಾರಿಕೆ ಯನ್ನು ಅನ್ವರ್ ವಹಿಸಿಕೊಟ್ಟಿದ್ದಾರೆ. ತೃಣಮೂಲ ಕಾಂಗ್ರೆಸ್‌ನ ಸದಸ್ಯತನ ಪಡೆಯುವ ವಿಷಯದ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಮುಂದೆ ತೀರ್ಮಾನಿಸಲಾಗುವುದೆಂದು ಅನ್ವರ್ ಬಳಿಕ ತಿಳಿಸಿದ್ದಾರೆ.

RELATED NEWS

You cannot copy contents of this page