ಕುಂಬಳೆ: ಆರಿಕ್ಕಾಡಿ ಶಿರಿಯ ಕಡವಿನಲ್ಲಿ ಕೆಲಸ ಮಾಡದೆ ಸಂಬಳ ಪಡೆಯುತ್ತಿದ್ದ ಕಡವು ಸುಪರ್ವೈಸರ್ ಕೆ.ಎಂ.ಅಬ್ಬಾಸ್ರನ್ನು ಕುಂಬಳೆ ಪಂಚಾಯತ್ ಆಡಳಿತ ಸಮಿತಿ ಆ ಹುದ್ದೆಯಿಂದ ತೆರವುಗೊಳಿಸಿದೆ. ಮಾತ್ರವಲ್ಲ ಕಡವಿನ ನೌಕರರ ಪಟ್ಟಿಯಿಂದ ಅಬ್ಬಾಸ್ರನ್ನು ಹೊರ ಹಾಕಿರುವುದಾಗಿ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ. ಕಡವಿನಲ್ಲಿ ಸುಪರ್ವೈಸರ್ ಹುದ್ದೆ ಕೂಡಾ ಇಲ್ಲದಾಗಿದೆ. ಬದಲಾಗಿ ನೌಕರರ ಹಾಜರು ದಾಖಲಿಸಲು ಸರಿಯಾಗಿ ಕೆಲಸ ನಿರ್ವಹಿಸುವ ಒಬ್ಬರನ್ನು ನೇಮಿಸಲು ತೀರ್ಮಾನಿಸಲಾಯಿತು. ಅಬ್ಬಾಸ್ ಯೂತ್ ಲೀಗ್ ನೇತಾರನಾಗಿದ್ದಾರೆ. ಅಬ್ಬಾಸ್ ಕಡವಿನಲ್ಲಿ ಹೊಯ್ಗೆ ಸಂಗ್ರಹ ಕೆಲಸ ನಿರ್ವಹಿಸುತ್ತಿಲ್ಲವೆಂದು ಪಂಚಾಯತ್ ಆಡಳಿತ ಸಮಿತಿ ಪತ್ತೆಹಚ್ಚಿದೆ. ಕೆಲಸ ನಿರ್ವಹಿಸದೆ ಸಂಬಳ ಪಡೆಯುವುದಕ್ಕೆ ಸಂಬಂಧಿಸಿ ಹಲವು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಪಂಚಾಯತ್ ಈ ಕ್ರಮ ಕೈಗೊಂಡಿದೆ. ಕಡವಿನಲ್ಲಿ ಸ್ಥಿತಿಗತಿಗಳನ್ನು ಸರಿಯಾಗಿ ತಿಳಿದುಕೊಳ್ಳಲು ಸಿಸಿ ಟಿವಿ ಸ್ಥಾಪಿಸಿದ್ದರೂ ಅದರ ಚಟುವಟಿಕೆ ಸ್ತಬ್ದಗೊಂಡಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಸಿಸಿ ಟಿವಿ ಚಟುವಟಿಕೆ ನಡೆಸಲು ಹಾಗೂ ದೃಶ್ಯಗಳು ಪಂಚಾಯತ್ ಕಾರ್ಯದರ್ಶಿಗೆ ಯಥಾಸಮಯ ಲಭ್ಯವಾಗುವ ರೀತಿಯಲ್ಲಿ ಅದನ್ನು ವ್ಯವಸ್ಥೆಗೊಳಿಸಲು ತೀರ್ಮಾನಿಸಲಾ ಯಿತು.ಕಡವಿನಲ್ಲಿ ಬಯೋವೆಟ್ರಿಕ್ ಪಂಚಿಂಗ್ ವ್ಯವಸ್ಥೆ ಏರ್ಪಡಿಸಲಾಗು ವುದು. ಕೆಲಸ ನಿರ್ವಹಿಸದೆ ದೀರ್ಘ ಕಾಲದಿಂದ ಸಂಬಳ ಪಡೆದವರಿಂದ ಅವರು ಪಡೆದ ಮೊತ್ತವನ್ನು ಬಡ್ಡಿ ಸಹಿತ ವಸೂಲಿ ಮಾಡಲು ಪಂಚಾಯ ತ್ ಆಡಳಿತ ಸಮಿತಿ ತೀರ್ಮಾನಿಸಿದೆ.
