ಶೌಚಾಲಯ, ವಿಶ್ರಾಂತಿ ಕೊಠಡಿ ನಿರ್ಮಾಣಗೊಂಡು ತಿಂಗಳುಗಳು ಕಳೆದರೂ ತೆರೆಯಲು ಕ್ರಮವಿಲ್ಲ: ಕುಂಬಳೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆ

ಕುಂಬಳೆ: ಸಾರ್ವಜನಿಕರ ಸೌಕರ್ಯ ಕ್ಕಾಗಿ ಕುಂಬಳೆ ಪೇಟೆಯಲ್ಲಿ ಸ್ಥಾಪಿಸಿದ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿ ಉದ್ಘಾಟನೆಗೊ ಳ್ಳದೆ ಉಳಿದುಕೊಂಡಿದೆ.

ಕುಂಬಳೆ ಪೇಟೆಯ ಅನಿಲ್ ಕುಂಬ್ಳೆ ರಸ್ತೆಯಲ್ಲಿ ಈ ಕಟ್ಟಡ ಕಾಮಗಾರಿ ಪೂರ್ಣಗೊಂಡು ಎರಡು ತಿಂಗಳು ಕಳೆಯಿತು. ಆದರೆ ಅದನ್ನು ಉದ್ಘಾಟಿಸಿ ಸಾರ್ವಜನಿಕರ ಅಗತ್ಯಕ್ಕೆ ತೆರೆದುಕೊಡಲು ಕ್ರಮ ಉಂಟಾಗಿಲ್ಲ.

ಕುಂಬಳೆ ಪಂಚಾಯತ್ ಫಂಡ್‌ನಿಂದ 40 ಲಕ್ಷ ರೂಪಾಯಿ ವ್ಯಯಿಸಿ ಈ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ. ಪೇಟೆಗೆ ತಲುಪುವ ಸಾರ್ವಜನಿಕರಿಗೆ ಶೌಚಾಲಯ ಸೌಕರ್ಯವಿಲ್ಲವೆಂಬ ಆರೋಪ ತೀವ್ರಗೊಂಡ ಹಿನ್ನೆಲೆಯಲ್ಲಿ ಪಂಚಾಯತ್ ಈ ಶೌಚಾಲಯ ನಿರ್ಮಿಸಲು ಕ್ರಮ  ಕೈಗೊಂಡಿತ್ತು. ಆದರೆ ಅದರ ನಿರ್ಮಾಣ ಪೂರ್ಣ ಗೊಂಡರೂ ಅದನ್ನು ತೆರೆಯಲು ಹಿಂದೇಟು ಹಾಕುತ್ತಿರುವುದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಎದುರಾಗಿದೆ. ಶೌಚಾಲಯ ಉದ್ಘಾಟನೆಗೆ ವಿಳಂಬ ಯಾಕೆ ಎಂಬ ಬಗ್ಗೆ ಸಾರ್ವಜನಿಕರು ಪ್ರಶ್ನಿಸತೊ ಡಗಿದ್ದು, ಆದರೆ ಪಂಚಾಯತ್‌ನಿಂದ ಯಾವುದೇ ಉತ್ತರ ಲಭಿಸುತ್ತಿಲ್ಲ. ಸಾರ್ವಜನಿಕರಿಗೆ ಪ್ರಯೋಜನವಿಲ್ಲದೆ ಯಾಕಾಗಿ ಭಾರೀ ಮೊತ್ತ ವ್ಯಯಿಸಿ ಈ ಕಟ್ಟಡ ನಿರ್ಮಿಸಲಾಗಿದೆಯೆಂದು ಜನರು ಪ್ರಶ್ನಿಸುತ್ತಿದ್ದಾರೆ. 

You cannot copy contents of this page