ಶ್ರೀ ಚಂಡಿಕಾಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಗುಳಿಗನ ಕೋಲ

ಕಾಸರಗೋಡು: ನೆಲ್ಲಿಕುಂಜೆ ಶಾಂತದುರ್ಗಾಂಬಾ ರಸ್ತೆ ಬಳಿಯ ಶ್ರೀ ಚಂಡಿಕಾ ಅನ್ನಪೂರ್ಣೇಶ್ವರೀ ಕ್ಷೇತ್ರದಲ್ಲಿ ನಾಳೆಯಿಂದ ಆರಂಭಗೊಂಡು ಫೆ.೧೭ರ ತನಕ ಮುಂದುವರಿಯುವ ವಾರ್ಷಿ ಕೋತ್ಸವ, ಮಂಗಲ ಮಹೋತ್ಸವ ಹಾಗೂ ಚೆಂಗುರುತಿ ಸಮರ್ಪಣಾ ಕಾರ್ಯಕ್ರಮ ದಂಗವಾಗಿ ಶ್ರೀ ಕ್ಷೇತ್ರದಲ್ಲಿ  ನಾಳೆ ಬೆಳಿಗ್ಗೆ ೧೧ ಗಂಟೆ ಯಿಂದ ಗುಳಿಗನ ಕೋಲ ನಡೆಯಲಿದೆ.

ವಾರ್ಷಿಕೋತ್ಸವದಂಗವಾಗಿ ಶುಕ್ರವಾರ ಬೆಳಿಗ್ಗೆ ೯ಕ್ಕೆ ಸ್ವಯಂವರ ಹೋಮ, ಬಳಿಕ ಸಂಪತ್ ಸಂವೃದ್ಧಿಗಾಗಿ ಪ್ರಾರ್ಥಿಸಿ ನಡೆಸುವ ವಿಶೇಷ ಆಚರಣೆಯಾದ ಸುವರ್ಣ ಕುಂಕುಮಾರ್ಚನೆಯೂ ನಡೆಯಲಿದೆ. ಫೆ.೧೭ರಂದು ಬೆಳಿಗ್ಗೆ ೧೦ಕ್ಕೆ ಅಭೀಷ್ಠ ಕಾರ್ಯಸಿದ್ದಿಗಾಗಿ ಶ್ರೀ ಕ್ಷೇತ್ರ ಸನ್ನಿಧಿಯಲ್ಲಿ ಪೂಂಗಾಲ ಮಹೋತ್ಸವ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ ಶ್ರೀ ಮಂಗಳ ಚಂಡಿಕಾದೇವಿ ಕ್ಷೇತ್ರ ನಿರ್ಮಾಣ ಕೆಲಸವೂ ಈಗಾಗಲೇ ಆರಂಭಗೊಂಡಿದೆ.

You cannot copy contents of this page