ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಕಲ್ಯಾಣ ಮಂಟಪ ‘ಕೈಲಾಸ್’ 24ರಂದು ಉದ್ಘಾಟನೆ
ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿದ ಕಲ್ಯಾಣ ಮಂಟಪ ಕೈಲಾಸ’ದ ಉದ್ಘಾಟನೆ ಈ ತಿಂಗಳ 24ರಂದು ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸು ವರು. ಕ್ಷೇತ್ರ ಟ್ರಸ್ಟ್ ಚೆಯರ್‌ಮೆನ್ ಎ. ಗೋವಿಂದನ್ ನಾಯರ್ ಅಧ್ಯ ಕ್ಷತೆ ವಹಿಸುವರು. ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿ, ಮಲಬಾರ್ ದೇವಸ್ವಂ ಮಂಡಳಿ ಅಸಿಸ್ಟೆಂಟ್ ಕಮಿಶನರ್ ಕೆ.ಪಿ. ಪ್ರದೀಪ್ ಕುಮಾರ್, ವಾರ್ಡ್ ಕೌನ್ಸಿಲರ್ ಶ್ರೀಲತ, ಬಿಂದು ಜ್ಯುವೆಲ್ಲರಿ ಅಭಿ ಲಾಷ್, ಡಾ. ಅನಂತ ಕಾಮತ್, ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಅರ್ಜುನನ್ ತಾಯಲಂಗಾಡಿ, ಉಮೇಶ್ ಅಣಂಗೂರು, ಉಷಾ ಅರ್ಜುನ, ಎ.ಸಿ. ಮನೋಜ್, ಎಂ. ಮಹೇಶ್, ಕೆ.ಆರ್. ಹರೀಶ್ ಮೊದಲಾದವರು ಉಪಸ್ಥಿತರಿರುವರು.