ಶ್ರೀಗಂಧ ಮರ ಕಳವು: ಆರೋಪಿ ಸೆರೆ

ಕಾಸರಗೋಡು:  ಅರಣ್ಯದಿಂದ ಶ್ರೀಗಂಧ ಮರಗಳನ್ನು ಕಳವುಗೈದು ಸಾಗಿಸಲು ಯತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಚಟ್ಟಂಚಾಲ್ ನಿವಾಸಿ  ಮುಹಮ್ಮದ್ ಕುಂಞಿ (೩೧) ಎಂಬಾತ ಬಂಧಿತ ಆರೋಪಿಯಾ ಗಿದ್ದಾನೆಂದು ತಿಳಿಸಲಾಗಿದೆ.

ಪಾಣಪ್ಪುಳ ಆಲಿಂಡಪಾರ ಎಂಬಲ್ಲಿಂದ ಕಳೆದ ಆಗಸ್ಟ್ ತಿಂಗಳಲ್ಲಿ ಶ್ರೀಗಂಧ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿರುವುದಾಗಿ ದೂರಲಾಗಿದೆ. ಈ ಪ್ರಕರಣದಲ್ಲಿ ಮುಹಮ್ಮದ್ ತಲೆಮ ರೆಸಿಕೊಂಡಿದ್ದನು. ತಳಿಪರಂಬ ಅರಣ್ಯ ಇಲಾಖೆ ರೇಂಜ್ ಆಫೀಸರ್ ಪಿ. ರಿತೀಶನ್ ನೇತೃತ್ವದ ತಂಡ ಮುಹಮ್ಮದ್ ಕುಂಞಿಯನ್ನು ಬಂಧಿಸಿದೆ. ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಾಗಿ ದಾಖಲಾದ ಹಲವು ಪ್ರಕರಣಗಳಲ್ಲಿ ಮುಹಮ್ಮದ್ ಕುಂಞಿ ಆರೋಪಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಆರೋಪಿಗೆ ಪಯ್ಯನ್ನೂರು ಜ್ಯುಡೀಶಿಯಲ್ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ರಿಮಾಂಡ್ ವಿಧಿಸಿದೆ.

You cannot copy contents of this page