ಶ್ರೀನಗರದಲ್ಲಿ ಉಗ್ರರು- ಸೇನೆ ನಡುವೆ ಗುಂಡಿನ ಚಕಮಕಿ
ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರ ಹರ್ವಾನ್ನಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ. ಈ ಪ್ರದೇಶದಲ್ಲಿ ಮೂವರು ಉಗ್ರರು ಅಡಗಿರುವುದಾಗಿ ಲಭಿಸಿದ ಖಚಿತ ಮಾಹಿತಿಯಂತೆ ಸೇನೆ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಉಗ್ರರು ಏಕಾಏಕಿಯಾಗಿ ಸೇನೆಯತ್ತ ಗುಂಡು ಹಾರಿಸಿ ದಾಳಿ ನಡೆಸಿದ್ದಾರೆ. ಆಗ ಭದ್ರತಾ ಪಡೆ ಆ ಪ್ರದೇಶವನ್ನಿಡೀ ಮುತ್ತಿಗೆ ಹಾಕಿ ಅಲ್ಲಿ ಅವಿತುಕೊಂಡಿರುವ ಉಗ್ರರನ್ನು ಮಟ್ಟ ಹಾಕುವ ಕಾರ್ಯಾಚರಣೆ ಮುಂದುವರಿಸಿದೆ.