ಸಂಕದ ಸಮೀಪ ಬಚ್ಚಿಟ್ಟ 60 ಲೀಟರ್ ಕರ್ನಾಟಕ ಮದ್ಯ ಪತ್ತೆ

ಕಾಸರಗೋಡು: ಚೆಂಗಳ ರಾಷ್ಟ್ರೀಯ ಹೆದ್ದಾರಿ ಬಳಿಯ ಸಂಕದ ಬಳಿ ಬಚ್ಚಿಡಲಾಗಿದ್ದ 60.12 ಲೀಟರ್ ಕರ್ನಾಟಕ ನಿರ್ಮಿತ ಮದ್ಯವನ್ನು ಅಬಕಾರಿ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಗುಪ್ತಚರ ವಿಭಾಗಕ್ಕೆ ಲಭಿಸಿದ ಗುಪ್ತ ಮಾಹಿತಿಯಂತೆ ಕಾಸರಗೋಡು ಎಕ್ಸೈಸ್ ಸರ್ಕಲ್ ಇನ್‌ಸ್ಪೆಕ್ಟರ್ ಅರುಣ್ ಡಿ ನೇತೃತ್ವದ ತಂಡ ನಿನ್ನೆ ಈ ಕಾರ್ಯಾಚರಣೆ ನಡೆಸಿ ಮಾಲನ್ನು ವಶಪಡಿಸಿಕೊಂಡಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ಸುಧೀಂದ್ರನ್, ಸಿಇಒಗಳಾದ ಚಾಲ್ಸ್ ಜೋಸ್, ದೀಪು, ಜಿತೇಂದ್ರನ್ ಎಂಬಿವರು ಒಳಗೊಂಡಿದ್ದರು. ಈ ಮಾಲನ್ನು ಅಲ್ಲಿ ಬಚ್ಚಿಟ್ಟವರ ಬಗ್ಗೆ ಅಬಕಾರಿ ತಂಡಕ್ಕೆ ಮಾಹಿತಿ ಲಭಿಸಿಲ್ಲ.

Leave a Reply

Your email address will not be published. Required fields are marked *

You cannot copy content of this page