ಸಂದರ್ಶನ ವೇಳೆ ಅನುಚಿತ ವರ್ತನೆ ಶಾಲಾ ಮೆನೇಜರ್ ವಿರುದ್ಧ ಕೇಸು

ಕಾಸರಗೋಡು: ಅಧ್ಯಾಪಕ ಹುದ್ದೆಗೆ ನಡೆಸಿದ ಸಂದರ್ಶನಕ್ಕೆ ತಲುಪಿದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂಬ ಆರೋಪದಂತೆ ಶಾಲಾ ಮೆನೇಜರ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೇಲ್ಪರಂಬದಲ್ಲಿರುವ  ಖಾಸಗಿ ಶಾಲೆಯೊಂದರ ಮೆನೇಜರ್ ವಿರುದ್ಧ ಶಾಲೆಯ ಅಧ್ಯಾಪಿಕೆಯಾದ ೩೫ರ ಹರೆಯದ ಯುವತಿ ದೂರು ನೀಡಿದ್ದಾರೆ. ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ  ಸಂದರ್ಶನಕ್ಕೆ ತಲುಪಿದಾಗ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದರೆಂದು ತಿಳಿಸಿ ಯುವತಿ ಇತ್ತೀಚೆಗೆ ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದಾರೆ.

You cannot copy contents of this page