ಸಅದಿಯದಲ್ಲಿ ಪ್ರಾರ್ಥನಾ ಸಮ್ಮೇಳನಕ್ಕೆ ಧ್ವಜಾರೋಹಣ
ದೇಳಿ: ರಂಜಾನ್ ೨೫ರ ರಾತ್ರಿಯಾದ ಇಂದು ದೇಳಿ ಸಅದಿಯದಲ್ಲಿ ನಡೆಯುವ ಪ್ರಾರ್ಥನಾ ಸಮ್ಮೇಳನವನ್ನು ಸಯ್ಯಿದ್ ಸೈನುಲ್ ಆಬಿದಿನ್ ಅಲ್ ಅಹ್ದಲ್ ಕಣ್ಣವ ಧ್ವಜಾರೋಹಣಗೊಳಿಸಿ ಚಾಲನೆ ನೀಡಿದರು. ನೂರುಲ್ ಉಲಮಾ ಮಕ್ಬರ ಸಿಯಾರತ್ಗೆ ಸಯ್ಯಿದ್ ಆಟಕೋಯ ತಂಙಳ್ ಆದೂರು ನೇತೃತ್ವ ನೀಡಿದರು. ಎ.ಪಿ. ಅಬ್ದುಲ್ಲ ಮುಸ್ಲಿಯಾರ್ ಮಾಣಿಕ್ಕೋತ್, ರಾಜ್ಮೋಹನ್ ಉಣ್ಣಿತ್ತಾನ್, ಹಾಜಿ ಅಬ್ದುಲ್ಲ ಹುಸೈನ್ ಸಹಿತ ಹಲವರು ಭಾಗವಹಿಸಿದರು.