ಸನ್ನಿ ಜೋಸೆಫ್ ಕಾಂಗ್ರೆಸ್ ರಾಜ್ಯ ಘಟಕದ ಹೊಸ ಅಧ್ಯಕ್ಷ
ನವದೆಹಲಿ: ಕಾಂಗ್ರೆಸ್ ರಾಜ್ಯ ಘಟಕ (ಕೆಪಿಸಿಸಿ)ದ ಹೊಸ ಅಧ್ಯಕ್ಷರನ್ನಾಗಿ ಪೆರುವಾಯೂರ್ ಶಾಸಕ ಸನ್ನಿ ಜೋಸೆಫ್ (72)ರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಿಸಿದೆ. ಇವರು 1970ರಿಂದಲೇ ಕಾಂಗ್ರೆಸ್ನ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಕಾಂಗ್ರೆಸ್ನ ಹಾಲಿ ರಾಜ್ಯ ಅಧ್ಯಕ್ಷ ಕೆ. ಸುಧಾಕರನ್ರನ್ನು ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಇದರ ಹೊರತಾಗಿ ಯುಡಿಎಫ್ ರಾಜ್ಯ ಸಂಚಾಲಕ ಸ್ಥಾನದಿಂದ ಎಂ.ಎಂ. ಹಸ್ಸನ್ರನ್ನು ಹೊರತುಪಡಿಸಿ, ಸಂಸದ ಅಡೂರ್ ಪ್ರಕಾಶ್ರಿಗೆ ಆ ಸ್ಥಾನ ನೀಡಲಾಗಿದೆ.
ಪಿ.ಸಿ. ವಿಶ್ವನಾಥ್, ಎ.ಪಿ. ಅನಿಲ್ ಕುಮಾರ್ ಮತ್ತು ಶಾಫಿ ಪರಂಬಿಲ್ರನ್ನು ಪಕ್ಷದ ರಾಜ್ಯ ಕಾರ್ಯನಿರ್ವಹಣಾ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅಂಟೋ ಆಂಟನಿಯವರನ್ನು ಕಾಂಗ್ರೆಸ್ನ ರಾಜ್ಯ ಅಧ್ಯಕ್ಷರನ್ನಾಗಿ ಆರಿಸುವ ಸಾಧ್ಯತೆ ಇತ್ತು. ಅದಕ್ಕೆ ಕಾಂಗ್ರೆಸ್ನ ಕೆಲವು ಹಿರಿಯ ನೇತಾರರು ವಿರೋಧ ವ್ಯಕ್ತಪಡಿಸಿದ್ದರು. ಅದರಿಂದಾಗಿ ಅಂಟೋ ಆಂಟನಿಯವರನ್ನು ಕೈಬಿಟ್ಟು ಕೊನೆಗೆ ಅಧ್ಯಕ್ಷ ಸ್ಥಾನವನ್ನು ಹೈಕಮಾಂಡ್ ಸನ್ನಿಜೋಸೆಫ್ರಿಗೆ ವಹಿಸಿಕೊಟ್ಟಿದೆ.