ಸಮಸ್ಯೆ ಮುಗಿಯದ ಹೊಸಂಗಡಿ ರೈಲ್ವೇ ಗೇಟ್ ವಾಹನ ದಟ್ಟಣೆಯಿಂದ ಸಂಚಾರ ತಡೆ ಸಮಸ್ಯೆ
ಹೊಸಂಗಡಿ: ಪೇಟೆಯಲ್ಲಿರುವ ರೈಲ್ವೇ ಗೇಟ್ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಒಂದೆಡೆ ಹೆದ್ದಾರಿ ನಿರ್ಮಾಣದಿಂದಾಗಿ ರಸ್ತೆ ಅಗಲ ಕಿರಿದಾಗಿದ್ದು, ಸಂಚಾರ ತಡೆ ಮಧ್ಯೆ ಗೇಟ್ ಮುಚ್ಚಿದಾಗ ಪೇಟೆ ಉಸಿರುಗಟ್ಟುವ ಸ್ಥಿತಿಗೆ ತಲುಪುತ್ತಿದೆ. ರೈಲುಗಳು, ಗೂಡ್ಸ್ ರೈಲು ಸಂಚಾರ ವೇಳೆ ದಿನಕ್ಕೆ ಹೆಚ್ಚಿನ ಹೊತ್ತು ಹೊಸಂಗಡಿ ರೈಲ್ವೇ ಗೇಟ್ ಮುಚ್ಚಿರುತ್ತದೆ. ಒಮ್ಮೆ ಗೇಟ್ ಹಾಕಿದರೆ ಸುಮಾರು ೧೫ ನಿಮಿಷ ಕಳೆದು ಮತ್ತೆ ತೆರೆಯಲಾಗುತ್ತಿದೆ. ಇದರಿಂದ ಮಂಜೇಶ್ವರ ಒಳಪೇಟೆಗೆ ತೆರಳುವ ವಾಹನಗಳು, ಅಲ್ಲಿಂದ ಹೊಸಂಗಡಿ ಬರುವ ವಾಹನಗಳು ಗೇಟ್ ಮುಂಭಾಗ ನಿಲ್ಲಿಸಬೇಕಾಗುತ್ತಿದೆ. ಇದು ಹೆದ್ದಾರಿಯನ್ನು ದಾಟಿ ಮುಂದುವರಿಯುತ್ತಿದ್ದು, ಇದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೂ ಸಂಚಾರ ತಡೆ ಉಂಟು ಮಾಡುತ್ತಿದೆ. ಜೊತೆಗೆ ಅತ್ಯಗತ್ಯ ಆಂಬುಲೆನ್ಸ್ ಸಂಚಾರಕ್ಕೂ ಸಮಸ್ಯೆ ಉಂಟಾಗುತ್ತಿದೆ. ನಿನ್ನೆ ಮಧ್ಯಾಹ್ನ ಗೂಡ್ಸ್ ರೈಲು ಒಂದು ಸಾಗಲು ಇಲ್ಲಿ ಸುಮಾರು ೨೦ ನಿಮಿಷಗಳ ಕಾಲ ಗೇಟ್ ಮುಚ್ಚಲಾಗಿದೆ. ಇದರಿಂದ ವಾಹನಗಳು ಪೇಟೆಯಲ್ಲಿ ತುಂಬಿ ಸಂ ಚಾರಮೊಟಕಾಗಿತ್ತು.
ಈ ಸಮಸ್ಯೆ ದಿನವೂ ಆಗಾಗ ಉಂಟಾಗುತ್ತಿದ್ದು, ಹೊಸಂಗಡಿ ಯಲ್ಲಿ ರೈಲ್ವೇ ಮೇಲ್ಸೇತುವೆ ಅತ್ಯಗತ್ಯವೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಶೀಘ್ರ ಮೇಲ್ಸೇ ತುವೆ ನಿರ್ಮಾಣಕ್ಕೆ ಮುಂದಾಗ ಬೇಕೆಂದು ಒತ್ತಾ ಯಿಸಿದ್ದಾರೆ.