ಸಮುದ್ರದಲ್ಲಿ ಬಲವಾದ ಅಲೆ ಅಪ್ಪಳಿಸಿ ಮೀನುಗಾರಿಕಾ ದೋಣಿ ನುಚ್ಚುನೂರು: ನಾಲ್ವರು ಬೆಸ್ತರು ಪಾರು

ಕಾಸರಗೋಡು: ಮೀನುಗಾರಿಕೆ ವೇಳೆ ಸಮುದ್ರದಲ್ಲಿ ಬಲವಾದ ಅಲೆ ಅಪ್ಪಳಿಸಿ ದೋಣಿ ನುಚ್ಚುನೂರಾದ ಘಟನೆ ನಡೆದಿದೆ. ನೀಲೇಶ್ವರ ತೈಕಡಪ್ಪುರಕ್ಕೆ ಸಮೀಪದ ಆಳ ಕಡಲಿನಲ್ಲಿ ಈ ಘಟನೆ ನಡೆದಿದೆ. ತೈಕಡಪ್ಪುರದ ಉಮೇಶ್ ಎಂಬ ವರ ಮಾಲಕತ್ವದಲ್ಲಿರುವ ಬೋಟ್ ಇದಾಗಿದೆ. ಸಮುದ್ರದಲ್ಲಿ ಮೀನು ಗಾರಿಕೆ ನಡೆಸುತ್ತಿದ್ದ ವೇಳೆ ಅದರ ಇಂಜಿನ್ ದಿಢೀರ್ ಆಗಿ ಕೈಕೊಟ್ಟಿತ್ತು. ಅದರಿಂದಾಗಿ ಬೋಟ್‌ಗೆ ದಡ ಸೇರಲು ಸಾಧ್ಯವಾಗಲಿಲ್ಲ. ಅದಾದ ಬೆನ್ನಲ್ಲೇ ಅದಕ್ಕೆ ಬಲ ವಾದ ಅಲೆಗಳು ಅಪ್ಪಳಿಸಿದೆ. ಈ ದೋಣಿ ಯಲ್ಲಿ ನಾರಾಯಣ, ಮಹಮ್ಮೂದ್, ಪ್ರಮೋದ್ ಮತ್ತು ನಾರಾಯಣನ್ ಎಂಬೀ ನಾಲ್ವರು ಬೆಸ್ತರಿದ್ದರು. ಯಾವುದೇ ರೀತಿಯ ಗಾಯ ಗಳಿಲ್ಲದೆ ಅವರು ಅದೃಷ್ಟವಶಾತ್ ಅನಾ ಹುತದಿಂದ ಪಾರಾಗಿ ದಡ ಸೇರಿದ್ದಾರೆ. ಬೋಟ್ ನುಚ್ಚುನೂರಾಗಿ ರುವುದರಿಂ ದಾಗಿ ಸುಮಾರು 11 ಲಕ್ಷ ರೂ.ಗಳ ನಷ್ಟ ಲೆಕ್ಕ ಹಾಕಲಾಗಿದೆ.

RELATED NEWS

You cannot copy contents of this page