ಸಮುದ್ರದಿಂದ ಅನಧಿಕೃತವಾಗಿ ಹೊಯ್ಗೆ ಸಾಗಾಟ: ೨ ಲಾರಿ ವಶ; ಓರ್ವ ಚಾಲಕ ಸೆರೆ

ಉಪ್ಪಳ: ಸಮುದ್ರದಿಂದ ಅನಧಿಕೃತವಾಗಿ ಸಂಗ್ರಹಿಸಿ ಸಾಗಿಸುತ್ತಿದ್ದ ಎgಡು ಲೋಡ್ ಹೊಯ್ಗೆಯನ್ನು ಮಂಜೇಶ್ವರ ಎಸ್‌ಐ ರುಮೇಶ್ ನೇತೃತ್ವದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಓರ್ವ ಲಾರಿ ಚಾಲಕನನ್ನು ಸೆರೆಹಿಡಿದಿದ್ದು, ಇನ್ನೋರ್ವ ಓಡಿ ಪರಾರಿಯಾಗಿದ್ದಾನೆ.

ಇಂದು ಬೆಳಿಗ್ಗೆ ೮ ಗಂಟೆ ವೇಳೆ ಉಪ್ಪಳ ರೈಲ್ವೇ ನಿಲ್ದಾಣ ಬಳಿಯ ಮಣಿಮುಂಡ ರಸ್ತೆಯಲ್ಲಿ ಹೊಯ್ಗೆ ವಶಪಡಿಸಲಾಗಿದೆ. ಈ ಸಂಬಂಧ ಒಂದು ಲಾರಿಯ ಚಾಲಕನಾದ ಪಾವೂರು ಮುಡಿಮಾರ್ ನಿವಾಸಿ ಮಹಮ್ಮದ್ ಅಶ್ರಫ್ (೩೭) ಎಂಬಾತನ್ನು ಸೆರೆಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಮುದ್ರದಿಂದ ಅನಧಿಕೃತವಾಗಿ ಸಂಗ್ರಹಿಸಿದ ಹೊಯ್ಗೆಯನ್ನು ಉಪ್ಪಳ  ರೈಲ್ವೇ ಹಳಿ ತನಕ ಒಂದು ವಾಹನದಲ್ಲಿ  ತಲುಪಿಸಿ ಅಲ್ಲಿಂದ ಟಿಪ್ಪರ್ ಲಾರಿಗಳಲ್ಲಿ ಸಾಗಿಸುತ್ತಿರುವುದಾಗಿ ತಿಳಿದುಬಂದಿದೆ. ಇದರಂತೆ ಇಂದು ಬೆಳಿಗ್ಗೆ ಕೂಡಾ ಹೊಯ್ಗೆ ಇದೇ ರೀತಿ ಸಾಗಿಸುತ್ತಿರುವುದು  ತಿಳಿದುಬಂದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

RELATED NEWS

You cannot copy contents of this page