ಸರಕಾರ ರಚನೆಗೆ ಮೋದಿ ಇಂದು ಹಕ್ಕು ಮಂಡನೆ: ಸುರೇಶ್ಗೋಪಿಗೆ ಕ್ಯಾಬಿನೆಟ್ ಸಚಿವ ಸ್ಥಾನ ಖಚಿತ
ನವದೆಹಲಿ: ಲೋಕಸಭಾ ಚುನಾ ವಣೆಯ ಫಲಿತಾಂಶದ ನಂತರ ನರೇಂದ್ರ ಮೋದಿ ಜೂನ್ ೮ರಂದು ಸತತ ೩ನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸರಕಾರ ರಚನೆಗಾಗಿರುವ ಹಕ್ಕು ಮಂಡನೆಯನ್ನು ಎನ್ಡಿಎ ಮೈತ್ರಿಕೂ ಟದ ಬೆಂಬಲಪತ್ರದೊಂದಿಗೆ ನರೇಂದ್ರ ಮೋದಿಯವರು ಇಂದು ಸಂಜೆ ರಾಷ್ಟ್ರ ಪತಿ ದ್ರೌಪದಿ ಮುರ್ಮುರಿಂದರನ್ನು ಭೇಟಿಯಾಗಿ ಅವರಿಗೆ ವಿದ್ಯುಕ್ತವಾಗಿ ಸಲ್ಲಿಸಲಿದ್ದಾರೆ. ಎನ್ಡಿಎ ನಾಯಕರೂ ಈ ಸಂದರ್ಭದಲ್ಲಿ ನರೇಂದ್ರಮೋದಿ ಯವರ ಜತೆ ಇರುವರು.
ಜೂನ್ 8ರಂದು ನರೇಂದ್ರಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರೆ ಪಂಡಿತ್ ಜವಹಾರ್ಲಾಲ್ ನೆಹರೂ ನಂತರ ಸತತ ಮೂರನೇ ಅವಧಿಗೆ ಪ್ರಧಾನಿಯಾದ ಮೊದಲ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ. ಅಂತೆಯೇ ಸತತ ಮೂರನೇ ಬಾರಿಗೆ ಪ್ರಧಾನಿಯಾದ ಕಾಂಗ್ರೆಸ್ಸೇತರ ವ್ಯಕ್ತಿ ಎಂಬ ಕೀರ್ತಿಯನ್ನು ಅವರು ಪಡೆಯುವರು.
ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನಗಳು ಬೇಕಾಗಿವೆ. ಆದರೆ ಬಿಜೆಪಿ 240 ಸ್ಥಾನಗಳಿಸಿದೆ. ಅಂದರೆ ಬಹುಮತಕ್ಕೆ ಬಿಜೆಪಿಗೆ 32 ಸ್ಥಾನಗಳು ಕಡಿಮೆ ಇದೆ. ಎನ್ಡಿಎ ಮಿತ್ರ ಪಕ್ಷಗಳು ತೆಲುಗು ದೇಶಂ (ಟಿಡಿಪಿ)-16, ನಿತೀಶ್ ಕುಮಾರ್ರ ಜೆಡಿಯು-12 ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದೆ. ಇತರ ಘಟಕ ಪಕ್ಷಗಳು, ಏಳುಮಂದಿ ಪಕ್ಷೇತರರು ಮತ್ತು ಇತರ ಕಿರುಪಕ್ಷಗಳು ಹೊಸ ಸರಕಾರ ರಚನೆಗೆ ಬೆಂಬಲ ನೀಡಿದ್ದು, ಆ ಮೂಲಕ ಎನ್ಡಿಎಯ ಒಟ್ಟು ಸದಸ್ಯರ ಬಲ ಈಗ 305ಕ್ಕೇರಿದೆ.
ಇದೇ ವೇಳೆ ಕೇರಳದ ತೃಶೂರು ಲೋಕಸಭಾ ಕ್ಷೇತ್ರದಿಂದ ಗೆದ್ದ ನಟ ಸುರೇಶ್ ಗೋಪಿಗೆ ಹೊಸ ಕೇಂದ್ರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವ ಸ್ಥಾನಲಭಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಟಿಡಿಪಿ ಲೋಕಸಭೆಯ ಸ್ಪೀಕರ್ ಸ್ಥಾನ ಹಾಗೂ 6 ಸಚಿವ ಸ್ಥಾನಗಳಿಗೆ ಬೇಡಿಕೆ ಮುಂದಿರಿಸಿದೆ. ಜೆಡಿಯು ಮೂರು ಸಚಿವ ಸ್ಥಾನಕ್ಕೆ ಬೇಡಿಕೆ ಒಡ್ಡಿದೆ. ಇನ್ನು ಚಿರಾಗ್-2, ಶಿವಸೇನೆಯ ಶಿಂಧೆ ಸಚಿವ ಸ್ಥಾನಕ್ಕಾಗಿ ಬೇಡಿಕೆ ಮುಂದಿರಿಸಿದೆ. ತನಗೂ ಸಚಿವ ಸ್ಥಾನ ಬೇಕೆಂಬ ಬೇಡಿಕೆಯನ್ನು ಬಿಹಾರದ ಮಾಜಿ ಮುಖ್ಯ ಮಂತ್ರಿ ಜಿತಿನ್ ರಾಮ್ ಮಾಂಝಿ ಮುಂದಿರಿಸಿದ್ದಾರೆ. ಮಾತ್ರವಲ್ಲ ಜೆಡಿ(ಎಸ್) ನೇತಾರ ಎಚ್.ಡಿ. ಕುಮಾರ ಸ್ವಾಮಿಗಿಗೂ ಸಚಿವ ಸ್ಥಾನ ಲಭಿಸುವ ಸಾಧ್ಯತೆ ಇದೆ. ಮಾತ್ರವಲ್ಲ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ನೀಡುವ ಬೇಡಿಕೆಯನ್ನು ಮುಂದಿರಿಸಿದೆ.