ಕಾಸರಗೋಡು: ಕೇರಳ ಸಹಕಾರಿ ವಲಯದ ನೌಕರರ ೨೦೨೧ರ ಬಳಿಕದ ತುಟ್ಟಿ ಭತ್ತೆ ಶೀಘ್ರ ಘೋಷಿಸಬೇಕೆಂದು ಕೇರಳ ಕೋ ಆಪರೇಟಿವ್ ಎಂಪ್ಲೋ ಯೀಸ್ ಸಂಘ್ (ಬಿಎಂಎಸ್) ಕಾಸರ ಗೋಡು ಟೌನ್ ಬ್ಯಾಂಕ್ ಎಂಪ್ಲೋ ಯೀಸ್ ವಾರ್ಷಿಕ ಸಮಾವೇಶ ಠರಾವುನಲ್ಲಿ ಆಗ್ರಹಿಸಿದೆ. ಬಿ.ಎಂ.ಎಸ್. ರಾಜ್ಯ ಉಪಾಧ್ಯಕ್ಷ, ಟೌನ್ ಬ್ಯಾಂಕ್ ಎಂಪ್ಲೋಯೀಸ್ ಸಂಘ್‌ನ ಅಧ್ಯಕ್ಷ ನ್ಯಾಯವಾದಿ ಪಿ. ಮುರಳೀಧರನ್ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಉಪೇಂ ದ್ರನ್ ಕೋಟೆಕಣಿ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ಉಪಾಧ್ಯಕ್ಷ ಕೆ.ಎ. ಶ್ರೀನಿವಾಸನ್, ಎಂಪ್ಲೋಯೀಸ್ ಸಂಘ್ ಉಪಾಧ್ಯಕ್ಷ ಅರುಣ್ ಮಾತನಾಡಿದರು.
ಕಾಸರಗೋಡು ಜಿಲ್ಲಾ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಎಂ ಪ್ಲೋಯೀಸ್ ಸಂಘ್ ಕಾರ್ಯದರ್ಶಿ ಕಮಲಾಕ್ಷ ಸ್ವಾಗತಿಸಿ, ಕೋಶಾಧಿಕಾರಿ ಸುನಿಲ್ ವಂದಿಸಿದರು. ನೂತನ ಸಮಿತಿಗೆ ಅಧ್ಯಕ್ಷರಾಗಿ ಪಿ. ಮುರಳೀಧರನ್, ಕಾರ್ಯದರ್ಶಿ ಕಮಲಾಕ್ಷ, ಕೋಶಾ ಧಿಕಾರಿ ಸುನಿಲ್ ಹಾಗೂ ೧೬ ಮಂದಿ ಸದಸ್ಯರು ಆಯ್ಕೆಯಾದರು.







