ಸಹಕಾರಿ ಸೇವಾ ಪರೀಕ್ಷಾ ಮಂಡಳಿ ಮೂಲಕ ನಡೆಯುವ ನೇಮಕಾತಿಗಳಿಗೆ ಭಾಷಾ ಅಲ್ಪಸಂಖ್ಯಾತರನ್ನು ಪರಿಗಣಿಸಬೇಕು-ಕೆಸಿಇಸಿ
ಮಂಜೇಶ್ವರ: ಸಹಕಾರಿ ಸೇವಾ ಪರೀಕ್ಷಾ ಮಂಡಳಿ ಮೂಲಕ ನಡೆಯುವ ನೇಮಕಾತಿಗಳಿಗೆ ಭಾಷಾ ಅಲ್ಪಸಂಖ್ಯಾತರ ವಲಯಕ್ಕೆ ವಿಶೇಷ ಪರಿಗಣನೆ ನೀಡಬೇಕು ಎಂದು ಕೇರಳ ಕೋ-ಓಪರೇಟಿವ್ ಎಂಪ್ಲೋ ಯಿಸ್ ಕೌನ್ಸಿಲ್(ಕೆಸಿಇಸಿ-ಎಐಟಿಯುಸಿ) ಮಜಿಬೈಲ್ ಘಟಕ ಸಮ್ಮೇಳನ ಆಗ್ರಹಿಸಿದೆ. ಪ್ರಸ್ತುತ ಬೇರೆ ಜಿಲ್ಲೆಗಳಿಂದ ಬರುವವರು ನಿರಂತರವಾಗಿ ರಜೆಯ ಮೇಲೆ ತೆರಳುತ್ತಿದ್ದು, ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಿರುವುದರಿಂದ ಸಾಕಷ್ಟು ಸಿಬ್ಬಂದಿ ಇಲ್ಲದೇ ಸಂಸ್ಥೆಗಳನ್ನು ನಡೆಸುವುದು ದುಸ್ತರವಾಗಿದೆ. ಇದನ್ನು ಪರಿಹರಿಸಲು ಸರಕಾರ ಮಧ್ಯಪ್ರವೇಶಿಸಬೇಕೆಂದು ಸಮಾವೇಶ ಆಗ್ರಹಿಸಿತು.
ಉIಟಿ¾್ಣ್ನ್ನ್ಛ ಜಿಲ್ಲಾ ಖಜಾಂಚಿ ಪಿ.ವಿಜಯಕುಮಾರ್ ಉದ್ಘಾಟಿ ಸಿದರು. ಕೆ.ಸಿ.ಇ. ಸಿ. ಜಿಲ್ಲಾ ಕಾರ್ಯದರ್ಶಿ ಬಿ.ಸುಕುಮಾರನ್. ಅಧ್ಯಕ್ಷ ರಾಮಕೃಷ್ಣ ಕಡಂಬಾರ್, ರಾಮಚಂದ್ರ ಮೊದಲಾದವರು ಮಾತನಾಡಿದರು.ಹರೀಶ್ ಕೆ.ಆರ್ ಧ್ವಜಾರೋಹಣಗೈದರು.ಗಂಗಾಧರ ಕೊಡ್ಡೆ ವರದಿ ಮಂಡಿಸಿದರು.
ನೂತನ ಸಮಿತಿಗೆ ಹರೀಶ್. ಕೆ.ಆರ್. (ಅಧ್ಯಕ್ಷ), ಗಂಗಾಧರ ಕೊಡ್ಡೆ (ಕಾರ್ಯದರ್ಶಿ), ಮುನೀರ್ (ಖಜಾಂಜಿ) ಆಯ್ಕೆಯಾದರು.