ಸಹೋದರ ಪುತ್ರನ ಆಕಸ್ಮಿಕ ಸಾವಿನ ಬೆನ್ನಲ್ಲೇ ನಿವೃತ್ತ ಬ್ಯಾಂಕ್ ನೌಕರ ಹೃದಯಾಘಾತದಿಂದ ನಿಧನ: ಪಾತನಡ್ಕ ದುಃಖತಪ್ತ

ಕಾಸರಗೋಡು: ಸಹೋದರ ಪುತ್ರ ಮೃತಪಟ್ಟ ಮರುದಿನ ನಿವೃತ್ತ ಬ್ಯಾಂಕ್ ನೌಕರ ಮೃತಪಟ್ಟರು. ಎರಡು ದಿನಗಳಲ್ಲಾಗಿ ಇಬ್ಬರು ನಿಧನ ಹೊಂದಿದ ಘಟನೆ ಸ್ಥಳೀಯರಲ್ಲಿ ಕಣ್ಣೀರಕೋಡಿಗೆ ಕಾರಣವಾಯಿತು. ಮುಳಿಯಾರು ಕೋಟೂರು ಸಮೀಪದ ಪಾತನಡ್ಕ ನಿವಾಸಿ ಬಾಲನ್ ನಾಯರ್‌ರ ಪುತ್ರ, ನಿರ್ಮಾಣ ಕಾರ್ಮಿಕನಾದ ಸುರೇಶ್ (42) ಗುರುವಾರ ಮೃತಪಟ್ಟಿದ್ದರು. ಮನೆಯಲ್ಲಿ ಮೆದುಳಿನ ಆಘಾತ ಉಂಟಾಗಿದ್ದು, ಕೂಡಲೇ ಚೆರ್ಕಳದ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತು. ಆದರೆ ಅಲ್ಲಿಂದ ಮಂಗಳೂರಿಗೆ ಕೊಂಡೊಯ್ಯಲು ತಿಳಿಸಿದ್ದು, ಅಲ್ಲಿಗೆ ಕರೆದೊಯ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಸುರೇಶ್‌ರ ಅಂತ್ಯ ಸಂಸ್ಕಾರ ಕಾರ್ಯಕ್ರಮಗಳು ಗುರುವಾರ ನಡೆದಿತ್ತು. ಈ ಆಘಾತದ ವೇಳೆಯಲ್ಲೇ ತಂದೆಯ ಸಹೋದರ ಹಾಗೂ ನೆರೆಮನೆ ನಿವಾಸಿ ನಿವೃತ್ತ ಬ್ಯಾಂಕ್ ನೌಕರನಾದ ರವೀಂದ್ರನ್ ನಾಯರ್ (72) ಹೃದಯಾಘಾತ ದಿಂದ ನಿಧನ ಹೊಂದಿದ್ದಾರೆ. ಸಮೀಪದ ದಿನಗಳಲ್ಲಿ ಸಂಭವಿಸಿದ ಎರಡು ಮರಣ ಈ ಪ್ರದೇಶದಲ್ಲಿ ದುಃಖಸಾಗರ ಸೃಷ್ಟಿಸಿದೆ.

ಮೃತ ಸುರೇಶ್ ತಾಯಿ ಸರೋಜಿನಿ, ಪತ್ನಿ ರಮ್ಯಾ, ಹಾಗೂ ಇಬ್ಬರು ಮಕ್ಕಳು, ಸಹೋದರರಾದ ವೇಣುಗೋಪಾಲನ್, ಬಿಜು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತ ರವೀಂದ್ರನ್ ನಾಯರ್ ಪತ್ನಿ ಸರಳ, ಮಕ್ಕಳಾದ ಜಿಷ್ಮ, ಜಿಶಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page