ಸಾಧಕರಿಗೆ ಬ್ರದರ್ಸ್ ಮಣಿಮುಂಡ ಪ್ರಶಸ್ತಿ ಇಂದು ಪ್ರಧಾನ
ಉಪ್ಪಳ:ಸಮಾಜ ಸೇವೆಯಲ್ಲಿರುವ ಉಪ್ಪಳ ಬ್ರದರ್ಸ್ ಮಣಿಮುಂಡ ಸಂಘಟನೆಯ ಮೂವತ್ತನೇ ವಾರ್ಷಿ ಕೋತ್ಸವದಂಗವಾಗಿ ಬ್ರದರ್ಸ್ ಮಣಿ ಮುಂಡ ಪ್ರಶಸ್ತಿಯನ್ನು ಮಣಿಮುಂಡ ಶಾಲಾ ಸಭಾಂಗಣದಲ್ಲಿ ಇಂದು ಸಂಜೆ 4 ಗಂಟೆಗೆ ನಡೆಯಲಿರುವ ಬ್ರದರ್ಸ್ ಮಣಿಮುಂಡ ಫೆಸ್ಟ್ ಸಮಾರೋಪ ಸಮಾವೇಶ ಶಾಸಕ ಎ.ಕೆ.ಎಂ. ಅಶ್ರಫ್ ಪ್ರದಾನ ಮಾಡುವರು. ಮೂಸಾ ಹಾಜಿ ಸ್ಮರಣಾರ್ಥ ಸಮಾಜ ಸಬಲೀಕರಣ ಪ್ರಶಸ್ತಿಗೆ ಕೆ.ಎಂ. ಅಬೂಬಕ್ಕರ್, ಯೂಸುಫ್ ಹಾಜಿ ಸ್ಮಾರಕ ಸಮುದಾಯ ಅಭಿವೃದ್ಧಿಗೆ ಎಂ.ಕೆ.ಅಲಿ ಮಾಸ್ತರ್ ಹಾಗೂ ಸಮಾಜ ಸೇವೆಗಾಗಿ ನೀಡಲಾಗುತ್ತಿರುವ ಜುಲ್ಫಿಕರ್ ಉಂಬೈಚಾ ಪ್ರಶಸ್ತಿಗೆ ಅಬ್ದುಲ್ ರಶೀದ್ ಉಸ್ಮಾನ್ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭ 12 ಮಂದಿಯನ್ನು ಸನ್ಮಾನ, ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಸಾಧಕರು ಹಾಗೂ ಪದವೀಧರರಿಗೆ ಸ್ಮರಣಿಕೆ ನೀಡಿ ಗೌರವ ಸಲ್ಲಿಸುವ ಕಾರ್ಯಕ್ರಮ ಕೂಡಾ ನಡೆಯಲಿದೆ.