ಸಾರ್ವತ್ರಿಕ ಚುನಾವಣೆ: ಅಧಿಕಾರಿಗಳಿಗೆ ತರಬೇತಿ

ಕಾಸರಗೋಡು: ಸಾರ್ವತ್ರಿಕ ಚುನಾವಣೆಯಂಗವಾಗಿ ಉಪ ಚುನಾವಣಾಧಿಕಾರಿಗಳಿಗೆ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮತ್ತು ಚುನಾವಣೆ ಸಂಬಂಧ ವ್ಯವಹಾರ ನಡೆಸುವ ನೌಕರರಿಗೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡಲಾಯಿತು. ಕಲೆಕ್ಟರೇಟ್ ಮಿನಿ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ತರಬೇತಿಯಲ್ಲಿ ಜಿಲ್ಲಾ ಚುನಾವಣಾಧಿ ಕಾರಿಯಾಗಿರುವ ಜಿಲ್ಲಾಧಿಕಾರಿ ಕೆ. ಇಂಬಶೇಖರ್, ತರಬೇತುದಾರ ನೋಡಲ್ ಆಫೀಸರ್ ಸೂಫಿಯಾನ್ ಅಹಮ್ಮದ್ ಮಾತನಾಡಿದರು. ರಾಜ್ಯ, ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್‌ಗಳಾದ ಸಜಿತ್ ಪಲೇರಿ, ನಾರಾಯಣ ಗೋಸಾಡ, ಸುರೇಶ್ ಬಾಬು ಜಿ, ಕೆ.ಪಿ. ಗಂಗಾಧರನ್, ಅಜಿತ್ ಕುಮಾರ್, ಗೋಪಾಲಕೃಷ್ಣ ಮೊದಲಾದವರು ವಿವಿಧ ವಿಷಯಗಳಲ್ಲಿ ತರಗತಿ ನೀಡಿದರು. ನೋಡಲ್ ಆಫೀಸರ್ ಕೆ. ಬಾಲಕೃಷ್ಣನ್ ನೇತೃತ್ವ ನೀಡಿದರು.

RELATED NEWS

You cannot copy contents of this page