ಸಿಐಟಿಯು ಪೈವಳಿಕೆ ಪಂಚಾಯತ್ ಸಮಾವೇಶ
ಪೈವಳಿಕೆ: ಸಿಐಟಿಯು ಪೈವಳಿಕೆ ಪಂಚಾಯತ್ ಸಮಾವೇಶ ಪಂಚಾ ಯತ್ ಕುಟುಂಬಶ್ರೀ ಹಾಲ್ನಲ್ಲಿ ಸರೋಜಾ ಸಾಂತ್ಯೋಡು ಅವರ ಅಧ್ಯಕ್ಷತೆಯಲ್ಲಿ ಜರಗಿತು. ಸಿಐಟಿಯು ಏರಿಯಾ ಕಾರ್ಯ ದರ್ಶಿ ಪ್ರಶಾಂತ್ ಕನಿಲ ಉದ್ಘಾಟಿಸಿದರು. ಸಿಐಟಿಯು ಏರಿಯಾ ಉಪಾಧ್ಯ ಚಂದ್ರ ನಾಕ್ ಮಾನಿಪ್ಪಾಡಿ ಮಾತನಾಡಿ ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಅಂಗನವಾಡಿ ಕಾರ್ಯಕರ್ತೆ ಯರನ್ನು ಆಶಾವರ್ಕರ್ಸ್ರನ್ನು ಗಂಜಿ ತಯಾರಿಸುವ ಕಾರ್ಮಿಕರನ್ನು ಖಾಯಂ ಉದ್ಯೋಗಿಯಾಗಿ ನೇಮಿಸಿಲ್ಲ. ಅವರಿಗೆ ಕೇಂದ್ರದಿಂದ ಸಿಗಬೇಕಾದ ಸಂಬಳದ ಪಾಲು ದೊರೆಯುವುದಿಲ್ಲ ಎಂದು ಆರೋಪಿಸಿದರು. ಇದರ ವಿರುದ್ಧ ಹೋರಾಟ ನಡೆಸಲು ಸಿಐಟಿಯು ಮುಂದಾಗಬೇಕೆಂದು ಕರೆ ನೀಡಿದರು. ಸಿಐಟಿಯು ಏರಿಯಾ ಖಜಾಂಚಿ ಸತೀಶ್ ಎಲಿಯಾನ ಮಾತನಾಡಿದರು. ಬಾಬು ವಾದ್ಯಪಡ್ಪು ಸ್ವಾಗತಿಸಿ, ರೋಬರ್ಟ್ ಪೆರಾವೋ ವಂದಿಸಿದರು.