ಸಿಐಟಿಯು ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ

ಬದಿಯಡ್ಕ: ತಲೆಹೊರೆ ಕಾರ್ಮಿಕರ ಸಂಘಟನೆ ಸಿಐಟಿಯು ಬದಿಯಡ್ಕ ಘಟಕದ ವತಿಯಿಂದ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಲಾಯಿತು. ಹೈದರಬಾದಿನಲ್ಲಿ ಜರಗಿದ ದೇಶೀಯ ಮಟ್ಟದ ಜ್ಯೂನಿಯರ್ ಕಬಡ್ಡಿ ಪಂದ್ಯಾಟದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಪಾಲ್ಗೊಂಡ ಮೈತ್ರಿ, ರಾಜ್ಯಮಟ್ಟದ ವಿಜ್ಞಾನೋತ್ಸವದಲ್ಲಿ ರಿಸರ್ಚ್ ಟೈಪ್‌ನಲ್ಲಿ ಎ ಗ್ರೇಡ್ ಪಡೆದ ಕೀರ್ತನಾ ಸಿ.ಕೆ. ಹಾಗೂ ಸಿಬಿಎಸ್‌ಇ ರಾಜ್ಯ ಕಲೋತ್ಸವದಲ್ಲಿ ಇಂಗ್ಲೀಷ್ ಉಪನ್ಯಾಸ ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ ನಂದನ ಸಿ.ಕೆ. ಇವರನ್ನು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕೆ. ಮೋಹನನ್ ಸ್ಮರಣಿಕೆ ನೀಡಿ ಅಭಿನಂದಿಸಿದರು. ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಜಯಪ್ರಕಾಶ್ ಬದಿಯಡ್ಕ, ಬದಿಯಡ್ಕ ಘಟಕ ಅಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿ ಬಾಲಕೃಷ್ಣ ಕನ್ನೆಪ್ಪಾಡಿ, ಕೋಶಾಧಿಕಾರಿ ಕೃಷ್ಣ ಪೂಜಾರಿ ಮವ್ವಾರು, ಘಟಕದ ಸದಸ್ಯರು ಜೊತೆಗಿದ್ದರು.

RELATED NEWS

You cannot copy contents of this page