ಸಿಡಿಲಿನ ಆಘಾತ ಮನೆಗೆ ವ್ಯಾಪಕ ಹಾನಿ

ಮಂಜೇಶ್ವರ: ಸಿಡಿಲಿನ ಆಘಾತದಿಂದ ಮನೆಗೆ ವ್ಯಾಪಕ ಹಾನಿಯುಂಟಾಗಿದೆ. ಬಂಗ್ರಮಂ ಜೇಶ್ವರ ನಿವಾಸಿ ಇಲೆಕ್ಟ್ರೀಶ್ಯನ್ ಪದ್ಮನಾಭ ಎಂಬವರ ಮನೆಗೆ ಮೊನ್ನೆ ರಾತ್ರಿ ಸಿಡಿಲಿನ ಆಘಾತವುಂಟಾಗಿದೆ. ಇದರಿಂದ ಕಾಂಕ್ರೀಟ್ ಮನೆಯ ಗೋಡೆ ವಿವಿಧೆಡೆ ಬಿರುಕುಬಿಟ್ಟಿದೆ. ವಿದ್ಯುತ್ ಉಪಕರಣಗಳು ಉರಿದು ನಾಶಗೊಂಡಿವೆ. ಘಟನೆ ವೇಳೆ ಮನೆಯಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

You cannot copy contents of this page