ಸಿನಿಮಾ ನಿರ್ಮಾಪಕ ಕಸ್ಟಡಿಗೆ: ತೃಕ್ಕರಿಪುರದಲ್ಲಿ ಇ.ಡಿ. ದಾಳಿ
ಕೊಚ್ಚಿ/ಕಾಸರಗೋಡು: ದುಬಾ ಯ ಬ್ಯಾಂಕ್‌ನಿಂದ ಲಪಟಾಯಿಸಿದ ೩೦೦ ಕೋಟಿ ರೂಪಾಯಿಗಳನ್ನು ಹೇಗೆ ಖರ್ಚು ಮಾಡಲಾಯಿತೆಂಬ ಬಗ್ಗೆ ತಿಳಿಯಲು ಎನ್‌ಫೋರ್ಸ್ ಮೆಂಟ್ ಡೈರೆಕ್ಟರೇಟ್ (ಇ.ಡಿ) ತನಿಖೆ ಆರಂಭಿಸಿದೆ.
ಇದರಂಗವಾಗಿ ವಂಚನೆ ಪ್ರಕರಣದ ಆರೋಪಿಯೂ, ಸಿನಿಮಾ ನಿರ್ಮಾ ಪಕನಾದ ತೃಕ್ಕರಿಪುರ ಉಡುಂಬುಂತಲ ನಿವಾಸಿ ಅಬ್ದುಲ್ ರಹ್ಮಾನ್ ಎಂಬಾ ತನನ್ನು ಕೊಚ್ಚಿಯಿಂದ ಕಸ್ಟಡಿಗೆ ತೆಗೆಯ ಲಾಗಿದೆ. ತನಿಖೆಗೊಳಪಡಿಸಿದ ಬಳಿಕ ನಿನ್ನೆ ಸಂಜೆ ಉಡುಂಬುಂತಲದ ಮನೆಯಲ್ಲಿ ಮಾಹಿತಿ ಸಂಗ್ರಹಿಸಲಾ ಯಿತು. ಮಾಹಿತಿ ಸಂಗ್ರಹ ರಾತ್ರಿ ೧೦.೩೦ರ ವರೆಗೆ ಮುಂದುವರಿಯಿತು.
ದುಬಾಯಿಯ ಬ್ಯಾಂಕೊಂದ ರಿಂದ ೩೦೦ ಕೋಟಿ ರೂಪಾಯಿ ಲಪಟಾಯಿಸಲಾಯಿತೆಂಬ ಆರೋಪ ದಂತೆ ಚಂದೇರ ಪೊಲೀಸರು ದಾಖಲಿ ಸಿಕೊಂಡ ಪ್ರಕರಣದಲ್ಲಿ ಅಬ್ದುಲ್ ರಹ್ಮಾನ್ ಆರೋಪಿಯಾಗಿ ದ್ದಾನೆ. ಈ ಪ್ರಕರಣದ ಮುಂದಿನ ತನಿಖೆಗೆ ಈ ಹಿಂದೆ ಹೈಕೋರ್ಟ್ ತಡೆಯೊಡ್ಡಿತ್ತು. ಆರೋಪಿ ನೀಡಿದ ಅರ್ಜಿಯ ಮೇರೆಗೆ ನ್ಯಾಯಾಲಯ ಈ ಆದೇಶ ನೀಡಿತ್ತು. ಈಮದ್ಯೆ ವಂಚನೆ ಮೂಲಕ ಸಂಗ್ರಹಿಸಿದ ಹಣವನ್ನು ಯಾವ ಅಗತ್ಯಕ್ಕಾಗಿ ಉಪಯೋ ಗಿಸಲಾಗಿದೆಯೆಂಬ ವಿಷಯದಲ್ಲಿ ಇ.ಡಿ ತನಿಖೆ ಆರಂಭಿಸಿದೆ. ನಿನ್ನೆ ಬೆಳಿಗ್ಗೆ ಕೊಚ್ಚಿಯ ಹೋಟೆಲ್ ನಿಂದ ಅಬ್ದುಲ್ ರಹ್ಮಾನ್‌ನನ್ನು ಕಸ್ಟಡಿಗೆ ತೆಗೆಯಲಾಗಿದೆ. ತನಿಖೆ ಮುಂದುವರಿ ಯುತ್ತಿದ್ದಂತೆ ಅಬ್ದುಲ್ ರಹ್ಮಾನ್‌ನ ಮಾಲಕತ್ವದಲ್ಲಿರುವ ೨೫ರಷ್ಟು ಸ್ಥಳಗಳಲ್ಲಿ ಇ.ಡಿ ದಾಳಿ ನಡೆಸಿದೆ.
೨೦೧೭-೧೮ರ ವೇಳೆಯಲ್ಲಿ ಅಬ್ದುಲ್ ರಹ್ಮಾನ್ ದುಬಾಯ ವಿವಿಧ ಬ್ಯಾಂಕ್‌ಗಳಿಗೆ ವಂಚಿಸಿ ಭಾರೀ ಮೊತ್ತ ವನ್ನು ಸಂಪಾದಿಸಿಕೊಂಡಿದ್ದಾನೆಂದು ಕೇಸು ದಾಖಲಿಸಲಾಗಿದೆ. ಹೀಗೆ ಸಂಪಾ ದಿಸಿದ ಹಣವನ್ನು ರಿಯಲ್ ಎಸ್ಟೇಟ್, ಸಿನಿಮಾ, ಉದ್ದಿಮೆ ಮೊದಲಾದ ವಲಯಗಳಲ್ಲಿ ಖರ್ಚು ಮಾಡಲಾಗಿದೆ ಯೆಂದು ಇ.ಡಿ ಸಂಶಯಿಸಿದೆ. ‘ಮಹೇಶಿಂಡೆ ಪ್ರತಿಕಾರಂ’ ಎಂಬ ಸಿನಿಮಾದ ನಿರ್ಮಾಣಕ್ಕಾಗಿ ಅಧಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಿರುವುದು ಅಬ್ದುಲ್ ರಹ್ಮಾನ್ ಆಗಿದ್ದಾನೆಂದು ಇಡಿ ಸಂಶಯಿಸಿದೆ.
ಎನ್‌ಐಎಯ ಸೆರೆಗೀಡಾಗಿ ರಿಮಾಂಡ್ ನಲ್ಲಿರುವ ಪೋಪುಲರ್ ಫ್ರಂಟ್ ಜಿಲ್ಲಾಧ್ಯಕ್ಷ ಸಲಾಂನ ಸಹೋದರನಾಗಿದ್ದಾನೆ ಅಬ್ದುಲ್ ರಹ್ಮಾನ್. ಇ.ಡಿ ಕ್ರಮಗಳ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಹಾಗೂ ಇಂಟೆಲಿಜೆನ್ಸ್ ತನಿಖೆ ಆರಂಭಿಸಿದೆ.