ಸಿನಿಮಾದಲ್ಲಿ ನಟಿಸಲು ಅವಕಾಶ ಭರವಸೆ ನೀಡಿ ಯುವತಿಗೆ ದೌರ್ಜನ್ಯ: ಬಾಬುರಾಜ್ ವಿರುದ್ಧ ದೂರು
ಇಡುಕ್ಕಿ: ನಟ ಬಾಬುರಾಜ್ರ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಸಿನಿಮಾದಲ್ಲಿ ಅವಕಾಶ ಭರವಸೆ ನೀಡಿ ದೌರ್ಜನ್ಯಗೈದಿರುವುದಾಗಿ ಯುವತಿ ನೀಡಿದ ದೂರಿನಂತೆ ಅಡಿಮಾಲಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಡಿಐಜಿಗೆ ಇ-ಮೇಲ್ ಮೂಲಕ ನೀಡಿದ ದೂರನ್ನು ಅಡಿಮಾಲಿ ಪೊಲೀಸರಿಗೆ ಹಸ್ತಾಂತರಿ ಲಾಗಿತ್ತು. 2019ರಲ್ಲಿ ಪೆರುಂಬಾ ವೂರ್ನಲ್ಲಿ ದೌರ್ಜನ್ಯಗೈದಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಯುವತಿಯ ಹೇಳಿಕೆಯನ್ನು ಆನ್ಲೈನ್ ಮೂಲಕ ದಾಖಲಿಸಿದ ಬಳಿಕ ಅಡಿಮಾಲಿ ಪೊಲೀಸರು ಕೇಸು ನೋಂದಾಯಿ ಸಿದ್ದಾರೆ. ಈ ದೂರನ್ನು ಎಸ್ಐಟಿ ತಂಡಕ್ಕೆ ವರ್ಗಾಯಿಸಲಾಗುವುದು. ಈ ಯುವತಿ ಬಾಬುರಾಜ್ರ ರಿಸೋರ್ಟ್ ನಲ್ಲಿ ಕೆಲಸ ಮಾಡಿರುವುದಾಗಿ ಸೂಚನೆ ಲಭಿಸಿದೆ.
ಇದೇ ವೇಳೆ ತನ್ನ ವಿರುದ್ಧ ಹೊರಿಸಿದ ಆರೋಪದಲ್ಲಿ ಪ್ರತಿಕ್ರಿಯಿ ಸಿದ ಬಾಬುರಾಜ್ ಅಮ್ಮ ಹಾಗೂ ತನ್ನ ವಿರುದ್ಧ ನಡೆಸುತ್ತಿರುವ ಗೂಢಾ ಲೋಚನೆ ಇದಾಗಿದೆ ಎಂದು ತಿಳಿಸಿದ್ದಾರೆ. ದೂರುದಾರೆಯ ಬ್ಯಾಂಕ್ ಖಾತೆಯನ್ನು ಕೂಡಾ ಪರಿಶೀಲಿ ಸಬೇಕೆಂದು ಬಾಬುರಾಜ್ ತಿಳಿಸಿದ್ದು, ಈ ದೂರು ನೀಡಿದವರು ಯಾರೆಂದು ತನಗೆ ತಿಳಿಯದೆಂದಿದ್ದಾರೆ.